ಬಂಟ್ವಾಳ:ತಾಲೂಕಿನ  ಸುಜೀರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಹಿಲ್ಡಾ ಪಿರೇರಾ ಅವರು   ಸೇವಾ ನಿವೃತ್ತಿಗೊಂಡ ಹಿನ್ನಲೆಯಲ್ಲಿ ಅವರಿಗೆ ಹೃದಯಸ್ಪರ್ಶಿ ಬೀಳ್ಳೊಡುಗೆ ಸಭಾರಂಭವು  ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ಉಮ್ಮರ್  ಫಾರೂಕ್ ಅವರು  ಅಧ್ಯಕ್ಷತೆ ವಹಿಸಿ ಮಾತನಾಡಿ,  ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿಯಾಗಿದ್ದು, ಮಕ್ಕಳ ಭವಿಷ್ಯವನ್ನು ರೂಪುಗೊಳಿಸಿ ಸತ್ಪ್ರಜೆಗಳನ್ನಾಗಿ ಮಾಡುವ ಮಹತ್ತರವಾದ ಪಾತ್ರವನ್ನು ಶಿಕ್ಷಕರು ಮಾಡುತ್ತಿದ್ದಾರೆ.

ಅಂತಹ ಉತ್ತಮ‌ ಶಿಕ್ಷಕರ ಸಾಲಿನಲ್ಲಿ ಹಿಲ್ಡಾ ಪಿರೇರ ಅವರು ಒಬ್ಬರಾಗಿದ್ದು,ಇವರ  ಮುಂದಿನ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ  ರಮ್ಲಾನ್ ಮಾರಿಪಳ್ಳ ಅವರು ಮಾತನಾಡಿ, ಮಕ್ಕಳು  ಶಿಕ್ಷಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕೆಂದು ತಿಳಿಸಿದರು.
                                                            

ಪುದು ಗ್ರಾ.ಪಂ. ಉಪಾಧ್ಯಕ್ಷೆ  ರುಕ್ಷಾನ ಬಾನು, ಸದಸ್ಯೆ ಮುಮ್ತಾಝ್, ರೆಹನಾ,   ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಅಬ್ದುಲ್ ಲತೀಫ್,  ಹಿದಾಯಿತುಲ್ಲಾ , ನಾಝ್ಲೀನ್,  ಚಂದ್ರಾವತಿ , ಝೋಹರ,  ರಂಝೀನಾ, ರುಕ್ಸಾನ,  ಕೌಸರ್, ವಸಂತಿ ಮತ್ತು ಸಲಾಂ, ದ.ಕ.ಜಿ.ಪ ಹಿ ಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುಬಾರಕ್, ಉಪಾಧ್ಯಕ್ಷರಾದ  ಮುಮ್ತಾಝ್   ಸಹಶಿಕ್ಷಕರಾದ ಸುಮನ,  ನಿವೃತ್ತ ಮುಖ್ಯಶಿಕ್ಷಕಿ  ಶಶಿಮಂಗಲಾ ವೈ, ನಿವೃತ್ತ ಶಿಕ್ಷಕ ಮೊಹಮ್ಮದ್ ತುಂಬೆ,  ಬಂಟ್ವಾಳ ತಾಲೂಕು ಸಹಶಿಕ್ಷಕ ಶಿಕ್ಷಕರ ಸಂಫದ ಖಜಾಂಜಿ ಜಯಪ್ರಕಾಶ್.ಕೆ.ಎಸ್ , ತುಂಬೆ ಕ್ಲಸ್ಟರ್  ಸಿ.ಆರ್.ಪಿ  ರಮೇಶ್ ಅವರು ಉಪಸ್ಥಿತರಿದ್ದರು.


 ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ  ಶಿಕ್ಷಕಿ ಹಿಲ್ಡಾ ಪಿರೇರಾರವರು    ಶಿಕ್ಷಣ ಇಲಾಖೆಯಲ್ಲಿ 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ  ಅನುಭವವನ್ನು ಸ್ಮರಿಸಿಕೊಂಡರು.

ಶಾಲೆಯ ಮುಖ್ಯ ಶಿಕ್ಷಕ  ಲೋಕಾನಾಯ್ಕ್  ಸ್ವಾಗತಿಸಿ, ಶಿಕ್ಷಕಿ ಜ್ಯೋತಿ ರಾವ್ ಕೆ ವಂದಿಸಿದರು. ಸಹಶಿಕ್ಷಕಿ  ಗೀತಾ ಆರ್ ಕೆ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *