ಅಟಲ್ ವಿರಾಸತ್, ಕ್ಯಾಂಪ್ಕೋ ಚುನಾವಣೆ ಸಹಿತ ಪ್ರಮುಖ ವಿಷಯಗಳ ಕುರಿತು ಬಿಜೆಪಿ ಮುಖಂಡರ ಸಭೆ
ಬಂಟ್ವಾಳ: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಪ್ರಯುಕ್ತ ನ. 19 ರಂದು ಪುತ್ತೂರಿನಲ್ಲಿ ನಡೆಯೆಲಿರುವ ಅಟಲ್ ವಿರಾಸತ್ ಕಾರ್ಯಕ್ರಮ ಮತ್ತು ನ. 23 ರಂದು ನಡೆಯಲಿರುವ ಕ್ಯಾಂಪ್ಕೋ ಚುನಾವಣೆ, ಬಿ ಎಲ್ ಎ 2 ಸಹಿತ ಪ್ರಮುಖ ವಿಷಯಗಳ ಕುರಿತು ಬಿಜೆಪಿ ಬಂಟ್ವಾಳದ ಪ್ರಮುಖರ ಸಭೆ ಬಿ, ಸಿ, ರೋಡ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.

ಈ ಸಭೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ಆರ್. ಚೆನ್ನಪ್ಪ ಕೋಟ್ಯಾನ್, ಕ್ಯಾಂಪ್ಕೊ ಮಾಜಿ ಅಧ್ಯಕ್ಷರು ಎಸ್.ಆರ್ .ಸತೀಶ್ಚಂದ್ರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ಕ್ಯಾಂಪ್ಕೋ ನಿರ್ದೇಶಕರಾದ ಮಹೇಶ್ ಚೌಟ, ಗಣೇಶ್ ನಾಯ್ಕ, ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ
ಪ್ರಾಥಮಿಕ ಕೃಷಿ ಪತ್ತಿನ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು,ವಿವಿದ ಮೋರ್ಚಾ, ಪ್ರಕೋಷ್ಠ ಗಳ ಪ್ರಮುಖರು, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿ ಗಳು ಹಾಗೂ ಪಕ್ಷದ ಪ್ರಮುಖರು ಭಾಗವಹಿಸಿದ್ದರು.



