ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿ ಮಠ ಮಳಲಿ ಮಟ್ಟಿ ಅಖಂಡ ಭಜನಾ ಸಪ್ತಾಹ 2025
ಕೈಕಂಬ: ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿ ಮಠ ಮಳಲಿ ಮಟ್ಟಿಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿ ಮಳಲಿ ಮಟ್ಟಿ ಇವರ ವತಿಯಿಂದ ಮಟ್ಟಿ ಅಖಂಡ ಭಜನಾ ಸಪ್ತಾಹ 2025 ಶ್ರೀ ರಾಜರಾಜೇಶ್ವರ ತಪೋನಿಧಿ ಶ್ರೀ ಶ್ರೀ ಶ್ರೀ 1008ರಾಜಯೋಗಿ. ನಿರ್ಮಲ್ ನಾಥ್ ಜೀ ಮಠಾಧೀಶರ ಆಶೀರ್ವಾದದೋಂದಿಗೆ ಬ್ರಹ್ಮ ಶ್ರೀ ವೇದ ವಿದ್ವಾನ್ ದೇರೆಬೈಲ್ ಶ್ರೀ ವಿಠಲದಾಸ್ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಉಮೇಶ್ ನಾಥ್ ಕದ್ರಿಯವರ ಉಪಸ್ಥಿತಿಯಲ್ಲಿ ನವೆಂಬರ್ 10 ರಂದು ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಣಹೋಮ , ಮಹಾಪೂಜೆ ನೆರವೇರಿತು.

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಅಖಂಡ ಭಜನೋತ್ಸವದ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ , ಗುರುಪುರ ಗೋಳಿದಡಿಗುತ್ತು ಗುರಿಕಾರರು ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ,ಉಧ್ಯಮಿ ಹರಿರಾವ್ ಕೈಕಂಬ, ಶ್ರೀ ಕ್ಷೇತ್ರ ಮಟ್ಟಿ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಸುರತ್ಕಲ್ ಉಪ ತಹಶೀಲ್ದಾರ್ ನವೀನ್,ಭೋಜ ಮೇಂಡ ಮಟ್ಟಿ, ಉಮಾವತಿ ಎಂ.ಶೆಟ್ಟಿ ನಾಡಜೆಗುತ್ತು, ಅಶೋಕ್ ಆಚಾರ್ಯ ಮತ್ತಿತರರು ದೇವಳಕ್ಕೆ ಆಗಮಿಸಿ ಅಖಂಡ ಭಜನೋತ್ಸವದಲ್ಲಿ ಪಾಲ್ಗೊಂಡಿದ್ದರು.
ದಿನಂಪ್ರತಿ ರಾತ್ರಿ ದೇವಸ್ಥಾನದಲ್ಲಿ ದೀಪಾರಾಧನೆ ,ಪಂಚಾಮೃತ ಅಭಿಷೇಕ,ರೋಟ್ ಪೂಜೆ,ರಂಗಪೂಜೆ, ಮಹಾಪೂಜೆಗೆ ಗಣ್ಯ ಅಥಿತಿಗಳು ಭಾಗವಹಿಸಿ ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು.



