ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯದಿಂದ ನೀರುಮಾರ್ಗ ಹೆಲ್ತ್ ಸೆಂಟರ್‌ಗೆ ವಿಶೇಷ ಮನ್ನಣೆ
ಗುರುಪುರ : ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಪ್ರತಿನಿಧಿಗಳ ತಂಡವೊAದು ನಡೆಸಿದ ರಾಷ್ಟಿçÃಯ ಗುಣಮಟ್ಟ ಮಾನದಂಡಗಳ ಮೌಲ್ಯಮಾಪನ ಪರಿಶೀಲನೆಯಲ್ಲಿ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೀರುಮಾರ್ಗ ಆಯುಷ್ಮಾನ್ ಆರೋಗ್ಯ ಕೇಂದ್ರವು ಶೇ. ೮೯ ಅಂಕದೊAದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ಅರ್ಹತೆ ಪಡೆದುಕೊಂಡಿದೆ.

ನೀರುಮಾರ್ಗ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಅಕ್ಟೋಬರ್ ೧೭ರಂದು ಕೇಂದ್ರ ಸಚಿವಾಲಯದ ಪರಿಶೀಲನೆ ನಡೆಸಿದ ತಂಡದಲ್ಲಿ ವಿ. ಟಿ. ರಾಜಚಂದ್ರ, ಸೆಂಥಾಮಿಝ್ ಸೆಲ್ವಿ ಕೆ, ಜಿಲ್ಲಾ ತಂಡದ ಡಾ. ರಾಜೇಶ್ವರಿ, ಶಾಂತಿಪ್ರಿಯಾ ಇದ್ದರು.

ಈ ಸಂದರ್ಭದಲ್ಲಿ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿರಾಗ್ ಡಿ. ಜಿ, ನೀರುಮಾರ್ಗ ಸಮುದಾಯ ಆರೋಗ್ಯಾಧಿಕಾರಿ ಚಿತ್ರಾ ಕೆ, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕರ್ ಉಪಸ್ಥಿತರಿದ್ದರು. ನೀರುಮಾರ್ಗ ಆಯುಷ್ಮಾನ್ ಆರೋಗ್ಯ ಕೇಂದ್ರ ಮತ್ತು ಪಂಚಾಯತ್ ಸಿಬ್ಬಂದಿ ವರ್ಗವು ಕೇಂದ್ರ ಸಚಿವಾಲಯದ ಪರಿಶೀಲನಾ ಪ್ರಕ್ರಿಯೆಯೊಂದಿಗೆ ಸಹಕರಿಸಿದರು.



