ಸೊಪೋರ್: ಜಮ್ಮುಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕಳೆದ ರಾತ್ರಿ ಉಗ್ರರ ಗುಂಪೊಂದು ಸೊಪೊರ್ ಪ್ರದೇಶದಲ್ಲಿ ಸರ್‌ಪಂಚ್‌ವೊಬ್ಬರನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ. 63 ವರ್ಷದ ಸರ್‌ಪಂಚ್‌ಅವರನ್ನು ಗುಲಾಮ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.

murder
ಜಮ್ಮುಕಾಶ್ಮೀರದ ಸೊಪೋರ್ ಜಿಲ್ಲೆಯ ನ್ಯಾಷನಲ್ ಕಾನ್ಫರೆನ್ಸ್‌ನ ಸರ್‌ಪಂಚ್ ಗುಲಾಮ್ ಮೊಹಮ್ಮದ್ ಅವರ ಮನೆಗೆ ನುಗ್ಗಿದ ಉಗ್ರರ ಗುಂಪೊಂದು, ಅವರನ್ನು ತಮ್ಮ ಕಾರಿನಲ್ಲಿ ಅಪಹರಿಸಿತ್ತು. ಅಪಹರಣದ ಬಳಿಕ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ, ಪರಾರಿಯಾಗಿದೆ.
ಈ ಘಟನೆಯಿಂದಾಗಿ ಜಮ್ಮುಕಾಶ್ಮೀರದಾದ್ಯಂತ ತಲ್ಲಣ ಮೂಡಿಸಿದೆ. ಪೊಲೀಸರು ಇದೀಗ ಪರಿಶೀಲನೆ ಕೈಗೊಂಡಿದ್ದು, ಸೊಪೋರ್ ಪ್ರದೇಶದಾದ್ಯಂತ ಭಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.
ಈ ಕೃತ್ಯಕ್ಕೆ ಇನ್ನೂ ಯಾವುದೇ ಸಂಘಟನೆಗಳು ಜವಾಬ್ದಾರಿ ಹೊತ್ತುಕೊಂಡಿಲ್ಲ.

By suddi9

Leave a Reply

Your email address will not be published. Required fields are marked *