ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ಆಶ್ರಯದಲ್ಲಿ ಸೆ. ೨೩ರಂದು ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಕೃಷಿ ಮಾಹಿತಿ ಮತ್ತು ಸರ್ಕಾರದಿಂದ ಕೃಷಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಗಾರ ನಡೆಯಿತು.

ಕಾರ್ಯಗಾರಕ್ಕೆ ಮುನ್ನ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕೃಷಿಭೂಮಿ ಇಲ್ಲದಿದ್ದರೂ ಕೃಷಿ ಬದುಕು ಕಂಡಿದ್ದೇನೆ. ಕೃಷಿ ಕೂಲಿನಾಲಿ ಮಾಡಿದ್ದೇನೆ. ಕೂಡುಕುಟುಂಬವಿದ್ದ ತುಳುನಾಡಲ್ಲಿ ಕೃಷಿ ಬದುಕು ಮುಖ್ಯವಾಗಿತ್ತು. ಈಗ ಕಾಲ ಬದಲಾಗಿದೆ. ಕೃಷಿ ಬದುಕಿನಲ್ಲಿ `ಯೋಗ’ ಇದೆ ಎಂದರು

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಜನ್ಮತಾ ನಾವೆಲ್ಲರೂ ಕೃಷಿಕರೇ ಆಗಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೊಮ್ಮೆ ಹೇರಳವಾಗಿದ್ದ ಭತ್ತದ ಕೃಷಿ ಈಗ ಕಡಿಮೆಯಾಗಿದೆ. ಹಡೀಲು ಗದ್ದೆಗಳು ಹೆಚ್ಚಾಗಿವೆ. ಇದಕ್ಕೆ ರಿಯಲ್ ಎಸ್ಟೇಟ್ ಕಾರಣವಿರಬಹುದು. ಈಗ ಲಾಭದಾಯಕ ಅಡಕೆ ಬೆಲೆ ಬಂದಿದೆ. ಕೃಷಿಯಿಂದ ಉತ್ತಮ ಜೀವನ ನಡೆಸಲು ಈಗಲೂ ಸಾಧ್ಯವಿದೆ ಎಂದರು ಹೇಳದರು.

ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಹಿಂದೆ ಜಿಲ್ಲೆಯಲ್ಲಿ ಕೃಷಿ ಪ್ರಧಾನವಾಗಿತ್ತು. ಈಗ ಕೃಷಿ ಭೂಮಿ ಹಡೀಲು ಬಿದ್ದಿವೆ. ಕೃಷಿಯಿಂದ ಮಕ್ಕಳು ದೂರ ಉಳಿಯಲು ಪಾಲಕರೇ ಕಾರಣರಾಗುತ್ತಿದ್ದಾರೆ. ಕೃಷಿ ಮುಂದುವರಿಸುವ ಅನಿವಾರ್ಯತೆಯ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಪ್ರಸ್ತಾವಿಕ ಮಾತನ್ನಾಡಿದರು. ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರೀವೇಣಿ ರಾವ್ ಕೆ, ಸಂಘದ ಉಪಾಧ್ಯಕ್ಷ ಜಿ. ಎಂ. ಉದಯ ಭಟ್, ಮಂಗಳೂರು ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕೇದಾರನಾಥ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಪ್ರವೀಣ್, ಬಜ್ಪೆ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ರೇಖಾ, ಬೆಳ್ಳೂರು ಸಹಕಾರಿ ಸಂಘದ ಅಧ್ಯಕ್ಷ ನಂದರಾಮ್ ರೈ, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ ಚಿಕ್ಕಬೆಟ್ಟು, ಎಡಪದವು ಸಹಕಾರ ಸಂಘದ ಅಧ್ಯಕ್ಷ ಸೋಹನ್ ಅತಿಕಾರಿ, ಹರಿಕೇಶ ಶೆಟ್ಟಿ, ಜನಾರ್ದನ ಬಿ. ಕುಡುಪು, ವಿನೋದಾ ಡಿ. ಅಂಚನ್, ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ ಇದ್ದರು. ಕೃಷಿಕರು ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೃಷಿಕರಾದ ಸುರೇಶ್ ಆರಿಗ ಮತ್ತು ಸತೀಶ್ ಕಾವ ಅವರನ್ನು ಗೌರವಿಸಲಾಯಿತು. ಗೋಕುಲದಾಸ್ ಶೆಟ್ಟಿ ಪಡುಪಳ್ಳಿ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಶ್ರೀದೇವಿ ಜಿ. ಟಿ. ವಂದಿಸಿದರು

By Suddi9

Leave a Reply

Your email address will not be published. Required fields are marked *