ಕೈಕಂಬ : ಇಲ್ಲಿನ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಇದರ ಜೀರ್ಣೋದ್ಧಾರ ಪ್ರಯುಕ್ತ ಅಕ್ಟೋಬರ್ ೨೪ರಂದು ಶಿಲಾನ್ಯಾಸ ನೆರವೇರಲಿದ್ದು, ಸೆ. ೨೧ರಂದು ಮಠದ ಆವರಣದಲ್ಲಿ ನಡೆದ ಭಕ್ತಾದಿಗಳ ಸಭೆಯಲ್ಲಿ ಶ್ರೀ ಜಂಗಮ ಸಂಸ್ಥಾನ ಮಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿಯವರು ಶಿಲಾನ್ಯಾಸ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿನ್ ಕುಮಾರ್ ಅಡಪ ಹಾಗೂ ಸಮಿತಿಯ ಪದಾಧಿಕಾರಿಗಳಾದ ಸಚಿನ್ ಶೆಟ್ಟಿ ಮಠದಬೈಲು, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಡಾ. ರವಿರಾಜ್ ಶೆಟ್ಟಿ ಕಾರಮೊಗರುಗುತ್ತು, ಹರೀಶ್ ಚಾಮಣಿ, ರಾಜೇಶ್ ಸುವರ್ಣ ಗುರುಪುರ, ನಾಗೇಶ್ ಕೊಟ್ಟಾರಿ, ಗಣೇಶ್ ಕೊಟ್ಟಾರಿ, ವಿನಯ್ ಸುವರ್ಣ, ಗೋಕುಲ್ ಪ್ರಭು, ರಮಾನಂದ ಶೆಟ್ಟಿ, ಪುರುಪೋತ್ತಮ ಮಲ್ಲಿ, ಹೇಮಚಂದ್ರ ಚಿಲಿಂಬಿಗುಡ್ಡೆ, ಶೋಧನ್ ಮಠದಬೈಲು, ಯತೀಶ್ ಕುಲಾಲ್, ರಾಜೇಶ್ ಶೆಟ್ಟಿ ಮಠದಬೈಲು, ವಸಂತ ಸುವರ್ಣ ಗುರುಪುರ, ನಿತೀನ್ ಕುಲವೂರು ಹಾಗೂ ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಮಠದ ಆರಾಧ್ಯ ದೇವರು ಬಾಲಾಲಯದಲ್ಲಿ ಪ್ರತಿಷ್ಠೆಗೊಂಡ ಬಳಿಕ ಮಠದಲ್ಲಿ ನಿರಂತರ ಶ್ರಮದಾನ ನಡೆಯುತ್ತಿದೆ.

ಅಕ್ಟೋಬರ್ ೨೪ರಂದು ಬೆಳಿಗ್ಗೆ ೯:೧೦ರ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮತ್ತು ಸುತ್ತೂರು ಶ್ರೀ ವೀರ ಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕೇಂದ್ರದ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ರುದ್ರಮುನಿ ಸ್ವಾಮೀಜಿ ಪ್ರಸ್ತಾವಿಸಿದರೆ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶಯ ಭಾಷಣ ಮಾಡಲಿದ್ದಾರೆ. ಸಚಿವರಾದ ಈಶ್ವರ ಖಂಡ್ರೆ, ಎಂ. ಬಿ. ಪಾಟೀಲ್, ಎಸ್. ಎಸ್. ಮಲ್ಲಿಕಾರ್ಜುನ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಎಂಎಲ್‌ಸಿ ಮಂಜುನಾಥ ಭಂಡಾರಿ, ಶ್ರೀ ವೇದಮೂರ್ತಿ ಚಂದ್ರಕಾAತ ಭಟ್, ಕುಲದೀಪ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ರಮಾನಾಥ ರೈ, ಕೃಷ್ಣ ಪಾಲೆಮಾರ್, ಬಿ. ನಾಗರಾಜ ಶೆಟ್ಟಿ, ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್. ಪೂಜಾರಿ, ಸೋಮಶೇಖರ್, ಸಿ. ಎಸ್. ಪುಟ್ಟರಾಜು, ಗಂಗಾAಬಿಕೆ ಮಲ್ಲಿಕಾರ್ಜುನ, ಬಿ. ಎಸ್. ಸಚ್ಚಿದಾನಂದ ಮೂರ್ತಿ, ಮನೋಹರ ಗಂಗಾಧರಪ್ಪ, ವಿನುತಾ ಆರ್., ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ

By suddi9

Leave a Reply

Your email address will not be published. Required fields are marked *