ನವದೆಹಲಿ: ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ನಿರ್ದೇಶನ ನೀಡಿದ್ದು, ಈ ಬಗ್ಗೆ ಇಂದು(ಡಿ.11) ಅಧಿಕೃತವಾಗಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಸೆಪ್ಟಮಬರ್ ತಿಂಗಳಲ್ಲಿ ಅಮೇರಿಕಾಕ್ಕೆ ಭೇಟಿ ನೀಡಿದ್ದ ಸಂದರ್ಭ ಭಾರತದ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಬೇಕೆಂದು ವಿಶ್ವಸಂಸ್ಥೆಯನ್ನು ಕೋರಿದ್ದರು.
ಅಮೇರಿಕಾದ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತಾಡುತ್ತಿದ್ದಾಗಲೂ ಯೋಗದ ಮಹತ್ವವನ್ನು ಸಾರಿದ್ದರು. ಮೋದಿಯ ಯೋಗದ ಉದ್ದೇಶವನ್ನು 170 ದೇಶಗಳು ಬೆಂಬಲಿಸಿದ್ದವು. ಯುರೋಪಿನ ಯೂನಿಯನ್ ಅಧ್ಯಕ್ಷ ಹರ್ಮನ್ ವಾನ್ ಹೋಂಪು ಅವರು ವಿಶ್ವಸಂಸ್ಥೆಯ 28 ಸದಸ್ಯರು ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ವಿಶ್ವಸಂಸ್ಥೆಗೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದರು. ಹಿಗೆ 170 ಸದಸ್ಯ ರಾಷ್ಟ್ರಗಳ ಬೆಂಬಲದಿಂದ ಜೂನ್ 21ನ್ನು ಅಧಿಕೃತವಾಗಿ ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲು ಸೂಚನೆ ನೀಡಿದೆ. ಈ ಬಗ್ಗೆ ಕೇಂದ್ರ ಸಚಿವೆ ಸುಶ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.
ವಿಶ್ವಸಂಸ್ಥೆಯ ನಿರ್ಧಾರದಿಂದ ಖುಷಿಗೊಂಡ ಮೋದಿ ಯೋಗಕ್ಕೆ 5000 ವರ್ಷಗಳಿಗಿಂತಲೂ ಜಾಸ್ತಿ ಇತಿಹಾಸವಿದ್ದು ವಿಶ್ವಸಂಸ್ಥೆಯ ನಿರ್ಧಾರದಿಂದ ಸಂತಸವಾಗಿದೆ ಎಂದಿದ್ದಾರೆ.

