ಕೈಕಂಬ:ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು ೬ರಂದು ಭಾನುವಾರ ಪುಂಚಮೆ ಶ್ರೀ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತರಾದ ಪೊಳಲಿ ಸರಕಾರಿ ಪ್ರೌಢ ಶಾಲೆಯ 14 ವಿದ್ಯಾರ್ಥಿಗಳು,ಸಹರಾ ಆಂಗ್ಲ ಮಾಧ್ಯಮ ಸ್ಕೂಲ್‌ ನ ಇಬ್ಬರು ವಿದ್ಯಾರ್ಥಿನಿಗೆ, ಸೈಂಟ್‌ ಡೋಮೇನಿಕ್‌ ಸ್ಕೂಲ್‌ ನ ಮೂವರು ವಿದ್ಯಾರ್ಥಿಗಳಿಗೆ, ಓಂ ಜನಹಿತಾಯ ಅರಳ ಸ್ಕೂಲ್‌ ಒರ್ವ ವಿದ್ಯಾರ್ಥಿಗೆ ಸುಮಾರು ೨೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಆಸರೆ ಸೇವಾ ಫೌಂಡೇಶನ್ ವತಿಯಿಂದ ನೀಡಲಾಯಿತು.


ಸಭೆಯ ಅಧ್ಯಕ್ಷತೆ ಅಬುಸಾಲಿ ಪಂಚಮೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾತಾ ಎಜುಕೇಶನ್ ‌ಟ್ರಸ್ಟ್‌ ಕದ್ರಿ ಮಂಗಳೂರು ಇಲ್ಲಿಯ ಶಾಖಾ ಪ್ರಬಂಧಕರಾದ ಶೈಲೇಶ್ ಶುಭಹಾರೈಸಿದರು.

ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ ಲೋಕೇಶ್ , ಬಂಟರ ಸಂಘ ಬೆಳ್ಳೂರು ವಲಯದ ಅಧ್ಯಕ್ಷ ರಾಧಾಕೃಷ್ಣರೈ ಮುಗುಳ್ಯ ,ಪೊಳಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಬ್ರಾಯ ಪೈ, ಕೃಷಿಪತ್ತಿನಸಹಕಾರ ಸಂಘದ ಉಪಾಧ್ಯಕ್ಷ ಗೋಪಾಲ್ ಅಂಚನ್ ಬಡಕಬೈಲ್ ಮಾತನಾಡಿ ಶುಭ ಹಾರೈಸಿದರು.

ಸಂಸ್ಥೆಯ ಟ್ರಸ್ಟಿಗಳು ಹಾಗೂ ಸದಸ್ಯರು ಮತ್ತು ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಆಸರೆ ಸೇವಾ ಫೌಂಡೇಶನ್ ಇದರ ಅಧ್ಯಕ್ಷರಾದ ಚಂದ್ರಹಾಸ್ ಪಲ್ಲಿಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಗೌರವಾಧ್ಯಕ್ಷರಾದ ರಾಜು ಕೋಟ್ಯಾನ್ ಸ್ವಾಗತಿಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಗಾಣೆಮಾರ್ ವಂದಿಸಿದರು. ಇಬ್ರಾಹಿಂ ನವಾಜ್ ಬಡಕಬೈಲ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *