ಬಂಟ್ವಾಳ: ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ಶಿಷ್ಯ ವರ್ಗವಾದ ಭಾಲಾವಲಿಕಾರ್ ಮತ್ತು ರಾಜಾಪುರ ಸಾರಸ್ವತ ಸಮಾಜದ ಬಾಂಧವರ ವಿಶೇಷ ಮಹಾಸಭೆಯು ಶ್ರೀ ಕೈವಲ್ಯ ಮಠ ಅನುಯಾಯಿಗಳ ಕ್ರಿಯಾ ಸಮಿತಿ ಮತ್ತು ಭಾಲಾವಲಿಕಾರ್ ,ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮೋಂತಿಮಾರು ಇವರ ಸಹಯೋಗದಲ್ಲಿ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ಶಿವಾನಂದ ಸರಸ್ವತಿ ಸಭಾಂಗಣದಲ್ಲಿ ನಡೆಯಿತು.
ಕ್ಷೇತ್ರದ ಪುರೋಹಿತರಾದ ಶ್ರೀ ಧನಂಜಯ ಭಟ್ ಮತ್ತು ಶ್ರೀ ರೋಹಿತ್ ಭಟ್ ಅವರ ದೀಪ ಪ್ರಜ್ವಲನೆಗೈದು ಗುರು ಸ್ಮರಣೆಯೊಂದಿಗೆ ಚಾಲನೆ ನೀಡಿದರು.

ಕ್ಷೇತ್ರದ ಮಾಜಿ ಮೊಕ್ತೇಸರರಾದ ಗಂಗಾಧರ ಶೇಂದ್ರಕಾರ್ ವೀರಕಂಬ ಅವರು ಸಭಾಧ್ಯಕ್ಷತೆ ವಹಿಸಿ ಗುರು ಪೀಠ, ಮಠ ಪರಂಪರೆ ಮತ್ತು ಸನಾತನ ಹಿಂದೂ ಧರ್ಮದಲ್ಲಿ ಅದರ ಮಹತ್ವವನ್ನು ತಿಳಿಸಿದರು.
ಶ್ರೀ ಕ್ಷೇತ್ರದ ಮಾಜಿ ಆಡಳಿತ ಮೋಕ್ತೇಸರರಾದ ವಿಕಾಸ್ ಪುತ್ತೂರು ಅವರು ಪ್ರಸಕ್ತ ವಿದ್ಯಾಮಾನಗಳ ಬೆಳವಣಿಗೆಗೆ ಕೆಲ ನಕಾರಾತ್ಮಕಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿವರಿಸಿದರು.
ಅತಿಥಿಯಾಗಿದ್ದ ಪುತ್ತೂರು ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯಕ್ ಆಜೇರು ಮಾತನಾಡುತ್ತಾ ಪುತ್ತೂರು ಸಂಘವು ಜಿಲ್ಲೆಯ ಉಳಿದ 9 ಸಂಘಗಳೊಂದಿಗೆ ನಿರಂತರ ಸಂಪರ್ಕ ಮಾಡುವ ಮೂಲಕ ಪ್ರಸ್ತುತ ಸಮಸ್ಯೆಗೆ ಏಕ ಮತದ ಅಭಿಪ್ರಾಯವನ್ನು ಕ್ರೂಢೀಕರಿಸಿದೆ ಎಂದರು.
ಶ್ರೀ ಗುರು ಪೀಠದ ಮತ್ತು ಶ್ರೀ ಗುರುಗಳ ಬಗ್ಗೆ ಆಧಾರ ರಹಿತ ಆರೋಪಗಳನ್ನು, ಕೇಸು ದಾಖಲಿಸಿರುವುದನ್ನು ಖಂಡಿಸಿದರಲ್ಲದೆ ರಾಜಾಪುರ ಸಾರಸ್ವತ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಠದ ಭಕ್ತರು ಶ್ರೀ ಮಠಕ್ಕೆ ತಮ್ಮ ನಿಷ್ಠೆ ಯನ್ನು ತೋರಬೇಕು, ಶ್ರೀ ಗುರುಗಳ ಆಜ್ಞೆ ಯಂತೆ ನಡೆದುಕೊಳ್ಳುವ ಸಂಕಲ್ಪ ಮಾಡಬೇಕೆಂದರು.
ಸಂಘದ ಕಾರ್ಯದರ್ಶಿ ಪ್ರವೀಣ್ ನಾಯಕ್ ಸ್ವಾಗತಿಸಿದರು.ಅತುಲ್ ನಾಯಕ್ ಆಳಾಬೆ ವಂದಿಸಿದರು. ಸಂತೋಷ್ ನಾಯಕ್ ಗುಂಡಿಮಜಲು ಕಾರ್ಯಕ್ರಮ ನಿರೂಪಿಸಿದರು.
