ಕೈಕಂಬ: ಸಾಧನೆಗೈತ ವಿದ್ಯಾರ್ಥಿಗಳ ಸನ್ಮಾನ ಮುಂಬರುವ 10ನೇ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡುತ್ತದೆ ಎಂದು ಉದ್ಘಾಟಕರಾದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಹೇಳಿದರು. ಅವರು ಸರಕಾರಿ ಪ್ರೌಢಶಾಲೆ ಪೊಳಲಿಯ ಪೋಷಕರ ಪ್ರಥಮ ಸಭೆ ಮತ್ತು 2024 25 ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವದಿಸಿದರು.

ಸರ್ವ ಮಂಗಳ ಸಭಾಂಗಣದಲ್ಲಿ ಶ್ರೀರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಭಾಷಣಕಾರರಾಗಿ ಸಿದ್ದಕಟ್ಟೆ ಪ್ರೌಢಶಾಲೆಯ ಸಮಾಜ ಶಿಕ್ಷಕರಾದಶ್ರೀ ಮಹೇಶ್ ಕರ್ಕೇರಾ ಆಗಮಿಸಿದ್ದರು. ವಿದ್ಯಾರ್ಥಿಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಾ ಮಾದಕ ವ್ಯಸನಗಳ ಬಗ್ಗೆ ತಿಳಿಸಿದರು. ಮಕ್ಕಳು ಭವಿಷ್ಯದ ಆಸ್ತಿ. ಮಣ್ಣನ್ನು ಎಷ್ಟು ಜಾಗರೂಕರಾಗಿ ಮಡಿಕೆಯನ್ನಾಗಿಸುತೇವೋ ಹಾಗೆ ಈ ಮೃದು ಮನಸ್ಸಿನ ಮಕ್ಕಳನ್ನು ಜಾಗರೂಕತೆಯಿಂದ ಉತ್ತಮ ನಾಗರಿಕರನ್ನಾಗಿ ಮಾಡಬೇಕೆಂದು ಪೋಷಕರಿಗೆ ಕಿವಿ ಮಾತನ್ನು ತಿಳಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ ನಾವಡ ಮಾತನಾಡಿ 5 ಗ್ರಾಮಗಳಿಗೆ ಉಪಯೋಗವಾಗಲೆಂದು ಪ್ರಾರಂಭಿಸಿದ ಪ್ರೌಢಶಾಲೆಯು ಇಂದು 10 ಗ್ರಾಮಗಳಿಂದ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವುದು ಈ ಶಾಲೆಯ ಹೆಗ್ಗಳಿಕೆ ಎಂದರು.

ಸನ್ಮಾನಗೊಂಡ ಪ್ರಣಂ ಮತ್ತು ಸಮ್ರದ್ ಶಾಲೆಯ ಬಗ್ಗೆ ಅನಿಸಿಕೆಗಳನ್ನಾಡಿದರು. ತಮ್ಮ ಅನಿಸಿಕೆಯಲ್ಲಿ ತನಗೆ ದೊರೆತ ಸೌಲಭ್ಯಗಳು ಮಾರ್ಗದರ್ಶನದ ಬಗ್ಗೆ ಶಿಕ್ಷಕರ ಬಗ್ಗೆ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಯಶವಂತ ಪೂಜಾರಿ, ಲೋಕೇಶ್ ಭರಣಿ ,ಚಂದ್ರಾವತಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ ನಿವೃತ್ತಿಗೊಳ್ಳಲಿರುವ ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಡಾ.ಪೌಲಿ ಇವರನ್ನು ಎಸ್ ಡಿ ಎಂ ಸಿ ಸದಸ್ಯರು ಮತ್ತು ಅಧ್ಯಕ್ಷರು ಪೋಷಕರ ಸಮ್ಮುಖದಲ್ಲಿ ಅಭಿನಂದಿಸಿದರು.

ಮುಖ್ಯ ಶಿಕ್ಷಕ ಸುಬ್ರಾಯ ಪೈ ಸ್ವಾಗತಿಸಿದರು ಶಿಕ್ಷಕಿ ವಸಂತಿ ವಂದಿಸಿದರು ಶಿಕ್ಷಕಿ ರಂಜಿತಾ ರಾಜೀವ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *