ಹನಾಪೂರ ಎಸ್. ಪಿ ಗ್ರಾಮ ಪಂಚಾಯಿತಿಯಲ್ಲಿ ಹಗಲು ಧರೋಡೆ
ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹನಾಪೂರ ಎಸ್. ಪಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಮತ್ತು ಅಧ್ಯಕ್ಷರಿಂದ ಹಗಲು ಧರೋಡೆ
ಸನ್ 2024-25 ನೇ ಸಾಲಿನ ವರ್ಗ ಒಂದು ಸ್ವಂತ ಸಂಪನ್ಮೂಲ ಮತ್ತು 15ನೇ ಹಣಕಾಸಿನಲ್ಲಿ ಯಾವುದೇ ನಿಯಮ ಪಾಲನೆ ಮಾಡದೆ ಯಾವ ಸದಸ್ಯರ ಗಮನಕ್ಕೂ ತರದೆ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಹಗಲು ದರೋಡೆಯನ್ನು ಮಾಡಿರುತ್ತಾರೆ

ವರ್ಗ ಒಂದರಲ್ಲಿ ಅಂದರೆ ಗ್ರಾಮ ಪಂಚಾಯತಿಯ ಸ್ವಂತ ಸಂಪನ್ಮೂಲದಲ್ಲಿ ಏನೂ ಕೆಲಸ ನಿರ್ವಹಣೆ ಮಾಡದೇ ಸಿಬ್ಬಂದಿಯ ಕುಟುಂಬಸ್ಥರ ಹೆಸರಿನಲ್ಲಿ ಅಧ್ಯಕ್ಷರ ಪರಿಚಯಸ್ಥರ ಹೆಸರಿನಲ್ಲಿ 10,000 ಕ್ಕೆ ಮೀರದಂತೆ ಚೆಕ್ಕುಗಳನ್ನು ಬರೆದುಕೊಂಡು ಗ್ರಾಮ ಪಂಚಾಯ್ತಿಯ ಬೊಕ್ಕಸಕ್ಕೆ ಕಣ್ಣ ಹಾಕಿದ್ದಾರೆ.
15 ನೇ ಹಣಕಾಸಿನಲ್ಲಿ ಒಂದು ಲಕ್ಷಕ್ಕಿಂತ ಮೇಲಿದ್ದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮಾಡದೆ ತಮಗೆ ಬೇಕಾದ ವೆಂಡರ್ ಗಳಿಗೆ ಪರ್ಸೆಂಟೇಜ್ ರೀತಿಯಲ್ಲಿ ಅಕ್ರಮ ಎಸೆಗಿರುತ್ತಾರೆ.
ಇದೆಲ್ಲವನ್ನು ಮಾಹಿತಿ ಹಕ್ಕಿನಡಿ ಕೇಳಿದರೆ ಮಾಹಿತಿಯನ್ನು ನೀಡಿರುವುದಿಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಇದರ ಬಗ್ಗೆ ತನಿಖೆ ಮಾಡದೆ ಅವರು ಕೂಡ ಪರೋಕ್ಷವಾಗಿ ಅಧಿಕಾರಿಗಳ ಪರವಾಗಿ ನಿಂತು ಭ್ರಷ್ಟಾಚಾರಕ್ಕೆ ಪ್ರೇರಣೆಯನ್ನು ನೀಡುತ್ತಿದ್ದಾರೆ ಹೊಲಕ್ಕೆ ರಕ್ಷಣೆಯನ್ನು ನೀಡುವರಾರು? ಪರ್ಸೆಂಟೇಜ್ ರೀತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವವರು ಯಾರು? ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲದ ಬೊಕ್ಕಸ ಪೋಲಾಗುವುದನ್ನು ನಿಲ್ಲಿಸುವುದು ಯಾವಾಗ?ಈ ಎಲ್ಲಾ ಪ್ರಶ್ನೆಗಳಿಗೆ ಸಮಗ್ರ ತನಿಖೆಯಾಗಬೇಕಾಗಿದೆ. ಎಂದು ಗ್ರಾಮಸ್ತರು ದೂರಿದ್ದಾರೆ.



