ಬಂಟ್ವಾಳ: ಹುತಾತ್ಮ ಸೈನಿಕರನ್ನು ಸ್ಮರಿಸುವ ಕಾರ್ಯ ಯುವಕರಲ್ಲಿ ದೇಶಪ್ರೇಮ ಮೂಡಿಸಲು ಸಹಕಾರಿಯಾಗಿದೆ, ಇಂತಹ ಕಾರ್ಯಕ್ರಮಗಳ ಮೂಲಕ ನಡೆದ ಕ್ರೀಡಾಕೂಟದಿಂದ ಉಳಿಕೆ ಮೊತ್ತವನ್ನು   ಸಮಾಜ ಸೇವೆಗೆ ಬಳಸಿಕೊಳ್ಳಿ ಎಂದು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ  ಜನಾರ್ಧನ ಪೂಜಾರಿ ಹೇಳಿದರು.

ಆದಿತ್ಯವಾರ  ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಟೀಮ್ ವೀರಕಂಭ ಆಶ್ರಯದಲ್ಲಿ ವೀರಕಂಭ ಗ್ರಾಮದ ನಂದನತಿಮಾರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಹ್ವಾನಿತ  ತಂಡಗಳ ಕ್ರಿಕೆಟ್ ಪಂದ್ಯಾಟ *ಸಿಂಧೂರ್ ಟ್ರೋಫಿ* ಪಂದ್ಯಾಟಕ್ಕೆ ಮುನ್ನ
ಭಯೋತ್ಪಾದಕರ ದಾಳಿಯಿಂದ ಮರಣ ಹೊಂದಿದ ಭಾರತೀಯರಿಗೆ ಗೌರವ ಶ್ರದ್ಧಾಂಜಲಿ ಹಾಗೂ ಯಶಸ್ವಿ ಸಿಂಧೂರ ಆಪರೇಷನ್ ನಲ್ಲಿ ವೀರಮರಣ ಹೊಂದಿದ  ಭಾರತೀಯ ಸೈನಿಕರಿಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆಗೈದು ಬಳಿಕ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪಂಚಾಯತ್  ಸದಸ್ಯರಾದ ,ದಿನೇಶ್ ಪೂಜಾರಿ, ನಿಶಾಂತ್ ರೈ,ಸಂದೀಪ್ ಪೂಜಾರಿ ಕಲಿಂಜ, ಮಾಜಿ ಸದಸ್ಯರಾದ ರಾಮಚಂದ್ರ ಪ್ರಭು, ಜಯಪ್ರಕಾಶ್ ತೆಕ್ಕಿಪಾಪು,  ಶೀನಪ್ಪ ಗೌಡ ನಂದನತಿಮಾರ್, ಸಂದೀಪ್ ಶೆಟ್ಟಿ ಅರೆಬೆಟ್ಟು, ಕೃಷ್ಣಪ್ಪ ಪೂಜಾರಿ ಕೆಪುಳಕೋಡಿ, ಕೇಶವ ನಾಯ್ಕ್ ಕೆಮ್ಮಟೆ, ಆನಂದ ಆಳ್ವ ಗೊಳ್ತಾಮಜಲ್,  ರಮೇಶ್ ಗೌಡ ಮೈರಾ, ತಿಲಕ್ ರಾಜ್, ನಾಗರಾಜ್ ಶೆಟ್ಟಿ ಅರೆಬೆಟ್ಟು,ವೇಣುಗೋಪಾಲ್ ವಿ ಆರ್ ಕೆ, ಸೌಮ್ಯ ವೇಣುಗೋಪಾಲ್,ಪ್ರಶಾಂತ್ ತೆಕ್ಕಿಪಾಪು, ಕೇಶವ ವಿ ಆರ್ ಕೆ, ಸತೀಶ್ ನಾಯ್ಕ ಕಿನ್ನಿ ಮೂಲೆ, ಧನರಾಜ್ ಗಾಣಿಗ ಗುಡ್ಡೆ ತೋಟ, ಮೊದಲಾದವರು ಉಪಸ್ಥಿತರಿದ್ದರು.
ನಂತರ ನಡೆದ ಸಿಂಧೂರ ಟ್ರೋಫಿ ಪಂದ್ಯಾಟದಲ್ಲಿ  ಫ್ರೆಂಡ್ಸ್ ರಾಯಪ್ಪಕೋಡಿ ಪ್ರಥಮ,  ಸಿದ್ಧಿವಿನಾಯಕ ತುಳಸಿವನ ದ್ವಿತೀಯ ಹಾಗೂ  ಟೀಮ್ ವೀರಕಂಭ ತೃತೀಯ ಬಹುಮಾನವನ್ನು ಪಡೆದುಕೊಂಡಿತು.
ಪಂದ್ಯಾಟ ಸಂಘಟಕ  ಮೇಘನಾಥ್ ರೈ ವೀರಕಂಭ ಸ್ವಾಗತಿಸಿ, ನಿತೀಶ್ ಗೌಡ ಮೈರಾ ವಂದಿಸಿದರು. ಡಿ.ಜೆ ಮಿಥುನ್ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *