ಉಳ್ಳಾಲ: ಶಿಕ್ಷಣದ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕಾರವನ್ನು ತಿಳಿಹೇಳುವ ಕಾರ್ಯವು ಪೋಷಕರಿಂದ ಆಗಬೇಕಾಗಿದೆ ಎಂದು ಶ್ರೀಕ್ಷೇತ್ರ ಸೋಮನಾಥ ಉಳಿಯದ ಶ್ರೀ ಅರಸು,ಧೂಮಾವತಿ ಬಂಟ ಪರಿವಾರ ದೈವಗಳ ದೈವಸ್ಥಾನದ ಗಡಿಗುರಿಕಾರರಾದ ಶ್ರೀ ಬಸಪ್ಪ ಯಾನೆ ಜೆ.ರವೀಂದ್ರ ನಾಯಕ್ ಅವರು ಹೇಳಿದ್ದಾರೆ.
ಭಾನುವಾರ ತೊಕ್ಕೊಟ್ಟು ಸಮೀಪದ ಕಾಪಿಕಾಡ್ ಕುದ್ಮಲ್ ರಂಗರಾವ್ ಸಭಾಭವನದಲ್ಲಿ  ನಡೆದ ಗಾಳದಕೊಂಕಣಿ ಅಭ್ಯುದಯ ಸಂಘ ( ರಿ) ಮಂಗಳೂರು ಇದರ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ, ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ‌ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಶ್ರೀ ಕ್ಷೇತ್ರ ಸೋಮನಾಥ ಉಳಿಯ ಆಡಳಿತ ಸಮಿತಿ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ್, ಗೌರವಾಧ್ಯಕ್ಷ ಯು. ದಯಾನಂದ ನಾಯಕ್ ಕುಲಶೇಖರ ಅವರು ಸಂಘದ ಚಟುವಟಿಕೆಯನ್ನು ಶ್ಲಾಘಿಸಿದರು.
ಶ್ರೀ ಸೋಮೇಶ್ವರೀ ಮಹಿಳಾ ಮಂಡಲ ಅಧ್ಯಕ್ಷೆ ಜಯಶೀಲಾ ಯು. ನಾಯಕ್, ಶ್ರೀಕ್ಷೇತ್ರ ಸೋಮನಾಥ ಉಳಿಯದ ಶ್ರೀ ಅರಸು,ಧೂಮಾವತಿ ಬಂಟ ಪರಿವಾರ ದೈವಗಳ ಪ್ರಧಾನ ಅರ್ಚಕರಾದ ಪ್ರಕಾಶ್ ನಾಯಕ್,ಸಹಾಯಕ ಅರ್ಚಕರಾದ ವಿನೋದ್ ನಾಯಕ್,ಸಂಘದ ಉಪಾಧ್ಯಕ್ಷರಾದ ಮಿಥಿಲೇಶ್ ನಾಯಕ್ ಮಣ್ಣಗುಡ್ಡ,ಹೇಮಾ ಕೇಶವ ನಾಯಕ್ ಸಂತೋಷ್ ನಗರ ಅವರು ವೇದಿಕೆಯಲ್ಲಿದ್ದರು.
ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅವರು ಸಭಾಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಈ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿ ಗಳಿಗೆ ನಗದು, ಫಲಕದೊಂದಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಸಂಘದ ಹಿರಿಯ ಸದಸ್ಯಾಗಿದ್ದ ಕೀರ್ತಿಶೇಷರಾದ ದಿ.ಧರ್ಮಪಾಲ್ ಅವರ ಸ್ಮರಣಾರ್ಥ ಪತ್ನಿ ಉಷಾ ಡಿ. ನಾಯಕ್ ಹಾಗೂ ಮಕ್ಕಳಿಗೆ ‘ಸಂಸ್ಮರಣಾ ಗೌರವಾರ್ಪಣೆ’ ಸಮರ್ಪಿಸಲಾಯಿತು. ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ನಿಶಿಲ್ ಎಸ್.ನಾಯಕ್ ಬಜಾಲ್ ಅವರನ್ನು ಸನ್ಮಾನಿಸಲಾಯಿತು. ಐವರು ವಿಕಲಚೇತನರಿಗೆ ಹಾಗು 10 ಮಂದಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಸಂಘದ ಕಾರ್ಯದರ್ಶಿ ಆಶಾ ನಾಯಕ್ ಗೋರಿಗುಡ್ಡೆ ಸ್ವಾಗತಿಸಿದರು, ಕೋಶಾಧಿಕಾರಿ ಡಾ.ಧನಲಕ್ಷ್ಮೀ ಎಂ.ನಾಯಕ್ ವರದಿ ವಾಚಿಸಿದರು.ಪ್ರಧಾನಕಾರ್ಯದರ್ಶಿ ಮುರಳೀಧರ್ ನಾಯಕ್ ಬಬ್ಬುಕಟ್ಟೆ ಲೆಕ್ಕಪತ್ರ ಮಂಡಿಸಿದರು, ಕಾರ್ಯದರ್ಶಿ  ಕಾರ್ಯಕ್ರಮವೆಂಕಟೇಶ್ ಬಂಟ್ವಾಳ ನಿರೂಪಿಸಿದರು.ಸಂಘಟನಾ ಕಾರ್ಯದರ್ಶಿಗಳಾದ  ಯೋಗೀಶ್ ನಾಯಕ್ ಪಂಪ್ ವೆಲ್,ರಜನಿ ಆರ್ .ಬಂಟ್ವಾಳ,ನಳಿನಿ ಎಸ್ ನಾಯಕ್ ,ಮಹೇಶ್ ಬಂಟ್ವಾಳ ಅವರು ಸಹಕರಿಸಿದರು.

By Suddi9

Leave a Reply

Your email address will not be published. Required fields are marked *