ಏಮಾಜೆ ಕಿರಿಯ ಪ್ರಾಥಮಿಕ ಶಾಲಾ ಚಿಣ್ಣರ ಬೇಸಿಗೆ ಶಿಬಿರ -2025
ಬಂಟ್ವಾಳ : ಮಕ್ಕಳ ಸೃಜನಾತ್ಮಕ ಕನಸುಗಳಿಗೆ ರೆಕ್ಕೆಯನ್ನು ಹಚ್ಚುವ ಸಲುವಾಗಿ ಏಮಾಜೆ ದ. ಕ. ಜಿ. ಪಂ. ಕಿ. ಪ್ರಾ. ಶಾಲೆಯಲ್ಲಿ 5 ದಿನದ ಚಿಣ್ಣರ ಬೇಸಿಗೆ ಶಿಬಿರ -2025 ನಡೆಯಿತು.ಪ್ರಾಕೃತಿಕ ಸೊಬಗಿನೊಂದಿಗೆ ಔಷಧೀಯ ಗಿಡಮೂಲಿಕೆಗಳ ಪರಿಚಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈಶಾನ್ಯ ವಿಹಾರ, ಮಾಯಾಲೋಕದ ಕೌತುಕ ಗಳನ್ನು ಅರಿಯುವ ನಿಟ್ಟಿನಲ್ಲಿ ಜಾದೂ ಪ್ರದರ್ಶನ, ವಿಜ್ಞಾನದ ವಿಸ್ಮಯಗಳನ್ನು ತಿಳಿದುಕೊಳ್ಳುವ ಸಲುವಾಗಿ ವಿಜ್ಞಾನ ವಿಸ್ಮಯ, ದೇಸಿ ಕಲೆಗಳನ್ನು ಕರಗತಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಲಾತ್ಮಕ ಕಲೆ, ಕರಕುಶಲತೆಯನ್ನು ಪ್ರದರ್ಶಿಸಲು ಬಣ್ಣದ ಚಿತ್ತಾರ ಹೀಗೆ ವಿಭಿನ್ನವಾಗಿ 5 ದಿನಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳ ಕಲಾಭಿವ್ಯಕ್ತಿಗಾಗಿ ಬೇಸಿಗೆ ಶಿಬಿರವನ್ನು ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಶಾಲಾ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುವಂತೆ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರು ರವರು ಸ್ಮಾರ್ಟ್ ಟಿವಿಯನ್ನು ಶಾಲೆಗೆ ಹಸ್ತಾಂತರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಬ್ಯಾಂಕ್ ಅಧಿಕಾರಿ ಜಯಲಕ್ಷ್ಮಿ ಈಶ್ವರ ಭಟ್, ಕ್ಷೇತ್ರ ವಿಶೇಷ ಸಂಪನ್ಮೂಲ ಶಿಕ್ಷಕಿ ಸುರೇಖಾ, ಮಾಯಾಮಂಜರಿ ಆರ್ಟ್ಸ್ ವಿಟ್ಲ, ಕೆದಿಲ ಸ. ಹಿ. ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ನಿತ್ಯಾನಂದ, ಪಿ.ಎಂ.ಶ್ರೀ ಪ್ರೌಢಶಾಲೆ ಸುರಿಬೈಲು ಶಾಲೆಯ ಸಹಶಿಕ್ಷಕಿ ಸ್ವಪ್ನ, ಬಾಲಕೃಷ್ಣ ಏಮಾಜೆ ಮೊದಲಾದವರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಈಶ್ವರ ಭಟ್ ಈಶಾನ್ಯ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾ ಗಣೇಶ ಆಚಾರ್ಯ, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ,ಚಿನ್ನಾ ಕಲ್ಲಡ್ಕ, ಉದ್ಯಮಿ ಈಶ್ವರ್ ಪೂಜಾರಿ, ಶ್ರೀಧರ್ ಮುಜಲ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಡಾ.ತ್ರಿವೇಣಿ ರಮೇಶ್ ಜೊತೆ ಶಾಲಾ ಸಹ ಶಿಕ್ಷಕ ಉದಯಚಂದ್ರ ,ಶಿಕ್ಷಕಿ ಅಕ್ಷತಾ, ದೀಕ್ಷಾ ಸಹಕರಿಸಿದರು.