ಬಂಟ್ವಾಳ:ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ಆರ್ಥಿಕ ವ್ಯವಹಾರವನ್ನಷ್ಠೇ ಮಾಡದೇ ಮಹಿಳಾ ಸಬಲೀಕರಣದ ಕಲ್ಪನೆಯೊಂದಿಗೆ ಹಿಂದುಳಿದ ವರ್ಗಗಳ ಮತ್ತು ಪ.ಜಾತಿ ,ಪಂಗಡಗಳ ಮಹಿಳೆಯರು ಸ್ವಾಭಿಮಾನಿಯಾಗಿ, ಸ್ವಾವಲಂಬನೆಯ ಬದುಕನ್ನು ನಿರ್ವಹಿಸಲು ಪೂರಕವಾದ ಸಹಕಾರ ನೀಡಿದಾಗ ಮಾನವ ಸಮಾಜ ಸಮಗ್ರ ಅಭಿವೃದ್ದಿಯೊಂದಿಗೆ ಸಾರ್ಥಕತೆಯ ಬದುಕನ್ನು ಕಾಣಲು ಸಾಧ್ಯವಾಗುತ್ತದೆ ಎಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಕರ್ನಾಟಕ ಸಹಕಾರಿ ಪಾಲಿಟೆಕ್ನಿಕ್ , ಸಿ.ಸಿ.ಟೆಕ್ ಮಂಗಳೂರು ,ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಮತ್ತು ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇವರ ಸಹಕಾರದಲ್ಲಿ ಸಿದ್ದಕಟ್ಟೆ ಸಹಕಾರಿ ಸಂಘದ ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ ಟೈಲರಿಂಗ್ ತರಬೇತಿ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ಮತ್ತು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಅವರು ಮಾತಾನಾಡಿದರು .
ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ಮಹಿಳೆಯರಿಗೆ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯನ್ನು ನೀಡುವುದರ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆ ಬದುಕಿಗೆ ಹಾದಿ ಮಾಡಿ ಜಿಲ್ಲೆಯ ಇತರ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಬಿದ್ರಿ ಹನುಮಾನ್ ದೇವಸ್ಥಾನದ ಅರ್ಚಕರಾದ ನಾಗೇಂದ್ರ ಭಟ್ ಮಾತಾನಾಡಿ ಗೃಹಿಣಿಯರು ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ ಪಡೆದುಕೊಳ್ಳುವುದರಿಂದ ತಮ್ಮ ಕುಟುಂಬ ನಿರ್ವಹಣೆಗೆ ಇತರರನ್ನು ಅವಲಂಬಿತರಾಗದೇ ಸಂತೃಪ್ತಿ ಜೀವನ ನಡೆಸಲು ಅನುಕೂಲವಾಗುತ್ತದೆ. ಎಲ್ಲಾ ಸಹಕಾರ ಸಂಘಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಎಲ್ಲರಿಗೂ ಪ್ರಯೋಜನ ಸಿಗಲಿದೆ ಎಂದರು.
ಮಂಗಳೂರು ಸಿ.ಸಿ.ಟೆಕ್ ಮ್ಯಾನೇಜರ್ ರವೀಂದ್ರ ಎಂ ಖೇಣಿ ಮಾತಾನಾಡಿ,ಮಂಗಳೂರು ಕರ್ನಾಟಕ ಸಹಕಾರಿ ಪಾಲಿಟೆಕ್ನಿಕ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತಗೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಾರ್ಗದರ್ಶನ ನೀಡುವ ಮೂಲಕ ಉನ್ನತ ಶ್ರೇಣಿಯಲ್ಲಿದ್ದು ,ಕೇಂದ್ರ ಸರಕಾರದ ವಿಶ್ವಕರ್ಮ ಯೋಜನೆಯಡಿಯಲ್ಲಿ ಹಣಕಾಸಿನ ಸೌಲಭ್ಯ ಪಡೆಯಲು ಇಂತಹ ತರಬೇತಿಗಳು ಅತ್ಯವಶ್ಯಕವಾಗಿದೆ,ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರು ಕಾರ್ಯಪ್ರವೃತ್ತರಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಅಧ್ಯಕ್ಷ ಪ್ರಭಾಕರ ಪ್ರಭು ಮಾತಾನಾಡಿ ಹಿರಿಯರ ಆಶಯದಂತೆ ನಮ್ಮ ಸಂಘವು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿರುವ ಜನರಿಗೆ ವಿವಿಧ ರೀತಿಯಲ್ಲಿ ತಮ್ಮ ಜೀವನೋಪಾಯಕ್ಕೆ ಪೂರಕವಾಗಿರುವ ಯೋಜನೆಗಳಿಗೆ ಸ್ಪಂದಿಸಿ ಸಹಕಾರ ನೀಡುತ್ತಾ ಬಂದಿದೆ . ಮುಂದಿನ ದಿನಗಳಲ್ಲಿಯೂ ಜನಪಯೋಗಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ , ಟೈಲರಿಂಗ್ ತರಬೇತಿ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತುದಾರೆ ಕು.ಪ್ರೇಮಾ, ಸಂಗಬೆಟ್ಟು ಗ್ರಾ.ಪ ಅಧ್ಯಕ್ಷೆ ರಾಜೀವಿ ಪೂಜಾರ್ತಿ ,ಉದ್ಯಮಿ ವೀಣಾ ಭಾಸ್ಕರ್ ನಾಯಕ್ ,ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ,ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಶಿವಯ್ಯ ಎಚ್ ,ಸ್ಥಾಪಕ ಅಧ್ಯಕ್ಷ ಮೈಕಲ್ ಡಿಕೋಸ್ತಾ,ಉಪಸ್ಥಿತರಿದ್ದರು.
ಈ ಸಂಧರ್ಭ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿದ್ದಕಟ್ಟೆ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಲಿಖಿತಾ ಆರ್ ಸಾಲ್ಯಾನ್ ರವರನ್ನು ಅಭಿನಂದಿಸಲಾಯಿತು. ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲಾಯಿತು.
ಸಂಘದ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಗಾರ್,ಜಾರಪ್ಪ ನಾಯ್ಕ ,ಎ ಶಿವ ಗೌಡ,ಮಂದರಾತಿ ಎಸ್ ಶೆಟ್ಟಿ,ಪುಷ್ಪಲತಾ ಎಸ್ ಆರ್ ,ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಎಚ್ ಹುಲಿಮೇರು, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ,ವಿಜಯ ಫೆರ್ನಾಂಡಿಸ್,ರಾಮಚಂದ್ರ ಶೆಟ್ಟಿಗಾರ್,ಸೀತಾರಾಮ ಶೆಟ್ಟಿ,ಹರಿಪ್ರಸಾದ್ ಶೆಟ್ಟಿ ,ನಿವೃತ್ತ ಶಿಕ್ಷಕ ಹಾಗೂ ಸಮಾಜ ಸೇವಕ ಕೆ ನಾರಾಯಣ ನಾಯಕ್ ಮತ್ತಿತರು ಉಪಸ್ಥಿತರಿದ್ದರು.
ಚಂದ್ರಿಕಾ ಸ್ವಾಗತಿಸಿ ,ಸಹಕಾರ ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
