ಭೂಮಿ ಖರೀದಿ ಸಂಕಲ್ಪಕ್ಕಾಗಿ 3ನೇ ಪಂಚಾರತಿ ಸೇವೆ
ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ದಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆಯುತ್ತಿರುವ ವಿಶೇಷ ಪಂಚಾರತಿ ಸೇವೆಯ 3ನೇ ಗುರುವಾರದ ಪಂಚಾರತಿ ಸೇವೆಯು ನಡೆಯಿತು. ಪಂಚ ಅಭ್ಯಾಗತರಾಗಿ ಮುನ್ನೂರು ಮಾಗಣೆಯ – ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಆಳ್ವರಪಾಲು, ಟೆಲಿಕಾಂ ಇಲಾಖೆಯ ನಿವೃತ್ತ ಸಬ್ ಡಿವಿಜನಲ್ ಇಂಜಿನಿಯರ್ – ಜನಾರ್ಧನ ಬಂಗೇರ ನಾಗನವಳಚ್ಚಿಲು, ಮಾಣಿಲ ಕುಕ್ಕಾಜೆಯ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕಾರಾಜೆ, ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷ ಎನ್. ಕೆ. ಶಿವ ಖಂಡಿಗ, ಸಜೀಪ ಮಾಗಣೆ ಗಟ್ಟಿ ಬಾಂಧವರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಗಟ್ಟಿ ಅಂದಾಡಿ ಭಾಗವಹಿಸಿ ಶ್ರೀ ಅಯ್ಯಪ್ಪ ದೇವರಿಗೆ ಪಂಚಾರತಿ ಬೆಳಗಿದರು.

ಎನ್. ಕೆ. ಶಿವ ಖಂಡಿಗ ಮಾತನಾಡಿ ಭೂಮಿ ಖರೀದಿಯಂತಹ ದೊಡ್ಡ ಕಾರ್ಯಕ್ಕೆ ದೇವರ ಅನುಗ್ರಹ ಅತೀ ಅವಶ್ಯ. ಅದಕ್ಕಾಗಿ ಪಂಚಾರತಿ ಸೇವೆ ಆಯೋಜಿಸಿ ಆ ಮೂಲಕ ಅಯ್ಯಪ್ಪ ದೇವರನ್ನು ಒಲಿಸಿಕೊಳ್ಳುವುದು ನಿಜವಾಗಿಯೂ ಹೆಮ್ಮೆ ಪಡುವಂತಹದ್ದು. ಎಲ್ಲಾ ಭಕ್ತರು ಪಾಲ್ಗೊಳ್ಳುವ ಮೂಲಕ ದೇವರ ಆಶೀರ್ವಾದ ಪಡೆದು ಪಾವನರಾಗುವ ಅವಕಾಶ ಈ ವಾರ ನಮಗೂ ಕಲ್ಪಿಸಿರುವುದು ನಮ್ಮ ಪುಣ್ಯ ಎಂದರು.
ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಮಾರ್ನಬೈಲು ಪ್ರಸ್ತಾವನೆಗೈದರು. ಆಡಳಿತ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಪದಾಧಿಕಾರಿಗಳಾದ ನಾಗೇಶ್ ಕುಲಾಲ್ ಕೋಮಾಲಿ, ಸೋಮನಾಥ ಗಟ್ಟಿ ಮಾರ್ನಬೈಲು, ಯೋಗೀಶ್ ಗಟ್ಟಿ ನಂದಾವರ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯ ಮಾರ್ನಬೈಲು, ಜಯಾನಂದ ಪಾಡಿ, ವಸಂತ ಪೂಜಾರಿ ನಾಗನವಳಚ್ಚಿಲು, ಗಣೇಶ್ ದೇವಾಡಿಗ ದಾಸರಗುಡ್ಡೆ, ಪ್ರಮೀಳಾ ಗಣೇಶ್, ಶಕುಂತಳಾ ಗಟ್ಟಿ, ಸುಮಿತ್ರಾ ಕಂದೂರು, ಸಂತೋಷ್ ಆಚಾರ್ಯ, ದೀಪ್ತೇಶ್ ಮೆಲ್ಕಾರ್, ಲಕ್ಷ್ಮಣ ಗಟ್ಟಿ ನಂದಾವರ, ಲೋಕಯ್ಯ ಬೋಳಂಗಡಿ ಮತ್ತಿತರರು ಉಪಸ್ಥಿತರಿದ್ದರು.