Published On: Mon, Apr 7th, 2025

ವಕೀಲರು ವೃತ್ತಿಯ ಮೇಲೆ ಪ್ರೀತಿ,ಶಿಸ್ತಿನಿಂದ ಕಾರ್ಯನಿರ್ವಹಿಸಿದಾಗ ಯಶಸ್ಸ: ನ್ಯಾಯಾಧೀಶೆ ಅಮೃತ ಎಸ್.ರಾವ್ ಬಂಟ್ವಾಳ

ಬಂಟ್ವಾಳ: ವಕೀಲರು ತಮ್ಮ ವೃತ್ತಿಯ ಮೇಲೆ ಪ್ರೀತಿ,ಶಿಸ್ತಿನಿಂದ ಕಾರ್ಯನಿರ್ವಹಿಸಿದಾಗ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಅಮೃತ ಎಸ್.ರಾವ್ ಬಂಟ್ವಾಳ ಅವರು ತಿಳಿಸಿದರು.


ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ನಡೆದ ವಕೀಲರ ಸಂಘ (ರಿ.) ಬಂಟ್ವಾಳ ಇದರ 2024-25 ನೇ ಸಾಲಿನ ವಾರ್ಷಿಕ “ಸ್ನೇಹ ಮಿಲನ”ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ  ಮಾತನಾಡಿದ ಅವರು,
ಬಂಟ್ವಾಳ ವಕೀಲರ ಸಂಘದ ಸದಸ್ಯೆಯಾಗಿದ್ದ ಕಾಲದ ಒಡನಾಟವನ್ನು ಮೆಲುಕು ಹಾಕಿದ ಅವರುಬಂಟ್ವಾಳ ವಕೀಲರ ಸಂಘದ ಸಮಾಜಮುಖಿ ಚಟುವಟಿಕೆಯನ್ನು ಶ್ಲಾಘಿಸಿದರಲ್ಲದೆ ಹೆತ್ತವರ  ಪ್ರೋತ್ಸಾಹ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ  ಎಮ್. ಅವರು  ವಹಿಸಿದ್ದರು.
 ಬಂಟ್ಚಾಳ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್ .ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯಮ್ಮ ,  ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್. ಸಿ.ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್,  ನಿವೃತ್ತ ನ್ಯಾಯಾಧೀಶರಿಗಳಾದ ಎನ್.ಶ್ರೀವತ್ಸ ಕೆದಿಲಾಯ, ಕೆ.ರಾಧಾಕೃಷ್ಣ , ಬಿ.ಗಣೇಶಾನಂದ ಎನ್.ಸೋಮಯಾಜಿ, ಮಂಗಳೂರು ವಕೀಲರ ಸಂಘದ  ಅಧ್ಯಕ್ಷ ಎಚ್.ವಿ.ರಾಘವೇಂದ್ರ, ವಕೀಲರ ಸೌಹಾರ್ದ ಸಹಕಾರಿ ಸಂಘ (ರಿ)ದ ಅಧ್ಯಕ್ಷ ವಿನಯ ಕುಮಾರ್ ಅವರು ವೇದಿಕೆಯಲ್ಲಿದ್ದರು.
ಇದೇ ವೇಳೆ ವಕೀಲ ವೃತ್ತಿ‌ಜೀವನದಿಂದ ನಿವೃತ್ತಿಯನ್ನು ಪಡೆದ ಜತ್ತನಕೋಡಿ ಶಂಕರ್ ಭಟ್ ಅವರನ್ನು ‌ಸನ್ನಾನಿಲಾಯಿತು. ವಕೀಲರ  ಕೈಪಿಡಿ ಹಾಗೂ  ವಕೀಲರ ಗುರುತಿನ‌ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.
ಚೆಸ್ ನಲ್ಲಿ  ಸಾಧನೆಗೈದ ವಿದ್ಯಾರ್ಥಿ     ದೀನ್ ರಾಮ್ ಶೆಟ್ಟಿ ‌ದಂಡೆ,ಕ್ಯಾಥೋಲಿಕ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಜೀವನ್ ಲೋಬೋ ಅವರನ್ನು ‌ಅಭಿನಂದಿಸಲಾಯಿತು.
ಸೌಹಾರ್ದ ಸಹಕಾರ ಸಂಘದ ಷೇರು ಬಂಡವಾಳ ಪತ್ರ ಹಾಗೂ ಪಿಗ್ಮಿ ಚೀಟಿಯನ್ನು ‌ವಿತರಿಸಲಾಯಿತು.
ನ್ಯಾಯವಾದಿಜಯರಾಮ ರೈ ಸ್ವಾಗತಿಸಿದರು, ಸಂಘದ ‌ಕಾರ್ಯದರ್ಶಿ ಚಂದ್ರಶೇಖರ್ ಬೈರಿಕಟ್ಟೆ ವಾರ್ಷಿಕ ವರದಿವಾಚಿಸಿದರು.ಅಭಿನಯಚಿದಾನಂದ ವಂದಿಸಿದರು.ವಕೀಲರಾದ ನಿತಿನ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter