ವಿಶ್ವ ಹಿಂದೂ ಪರಿಷದ್,ಬಜರಂಗದಳ ಬಂಟ್ವಾಳ ಪ್ರಖಂಡದಿಂದ ಪೊಳಲಿ ಕ್ಷೇತ್ರದ “ಅಮ್ಮನೆಡೆಗೆ ನಮ್ಮ ನಡಿಗೆ”ಪಾದಯಾತ್ರೆ,ವಿವಿಧ ಬೇಡಿಕೆಯ ಮನವಿ ಸಲ್ಲಿಕೆ
ಬಂಟ್ವಾಳ:ವಿಶ್ವ ಹಿಂದೂ ಪರಿಷದ್,ಬಜರಂಗದಳ ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ಐದನೇ ವರ್ಷದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ “ಅಮ್ಮನೆಡೆಗೆ ನಮ್ಮ ನಡಿಗೆ”ಪಾದಯಾತ್ರೆಯು ಭಾನುವಾರ ನಡೆಯಿತು.
ವಿ.ಹಿಂ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷ,ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.

ಬೆಳಿಗ್ಗೆ 5.30 ಕ್ಕೆ ಏಕಕಾಲದಲ್ಲಿ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ ಹಾಗೂ ಪುದು ಗ್ರಾಮದ ಕಡೇಗೋಳಿ ಪೊಳಲಿ ದ್ವಾರದ ಬಳಿಯಿಂದ ಮತ್ತು ಗುರುಪುರ ಕೈಕಂಬ ಪೊಳಲಿ ದ್ವಾರದಿಂದ ಬೆ.6.30 ಕ್ಕೆ ಆರಂಭವಾದ ಪಾದಯಾತ್ರೆ ಸುಮಾರು 9.30 ರ ಹೊತ್ತಿಗೆ ಪೊಳಲಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಿಯ ಸಾನಿಧ್ಯದಲ್ಲಿಸಂಪನ್ನಗೊಂಡಿತು.

ವಿ.ಹಿಂ.ಪ,ಬಜರಂಗದಳದ ಪ್ರಮುಖರಾದ ಡಾ.ಕೃಷ್ಣಪ್ರಸನ್ನ ಪುತ್ತೂರು, ಕ.ಕೃಷ್ಣಪ್ಪ,ಭರತ್ ಕುಮ್ಡೇಲು,ರಾಜೇಶ್ ಗಂಜಿಮಠ, ಸಂತೋಷ್ ಸರಪಾಡಿ,ಕೇಶವ ದೈಪಲ ಮೊದಲಾದವರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.
ಇದೇ ವೇಳೆ ಪೊಳಲಿ ಶ್ರೀರಾಜರಾಜೇಶ್ವರಿ ದೇವಾಲಯಕ್ಕಾಗಮಿಸುವ ಭಕ್ತರಿಗೆ ಹಿಂದೂ ಸಂಸ್ಕೃತಿಗೆ ಪೂರಕವಾದ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು,ದೇವಸ್ಥಾನದ ವತಿಯಿಂದ ಸುಸಜ್ಜಿತವಾದ ಗೋಶಾಲೆ ನಿರ್ಮಾಣ ಮತ್ತು ನಿರ್ವಹಣೆ ಮಾಡಬೇಕು, ಹಿಂದೂ ಬಾಲಸಂಸ್ಕಾರ ಕೇಂದ್ರವನ್ನು ತೆರೆದು ಹಿಂದೂ ಧಾರ್ಮಿಕ ಶಿಕ್ಷಣವನ್ನು ನೀಡುವಂತಾಗಬೇಕು, ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಬೇಕು,ದೇವಳದ ಜಾತ್ರೆ,ಉತ್ಸವಾದಿ ಸಂದರ್ಭ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯನುಸಾರ ಹಿಂದೂಗಳಿಗೆ ಮಾತ್ರ ವ್ಯಾಪಾರ,ವ್ಯವಹಾರ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಬೇಕು ಹೊರತು ಅನ್ಯಮತೀಯರಿಗೆ ಇದಕ್ಕೆ ಅವಕಾಶ ನೀಡಬಾರದು,ಉತ್ಸವದ ಸಮಯಗಳಲ್ಲಿ ರಾತ್ರಿ ಬೋಜನದ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿ ದೇವಳದ ಆಡಳಿತ ಮಂಡಳಿಗೆ ಮನವಿಯನ್ನು ಸಲ್ಲಿಸಲಾಯಿತು.