ಮಾ.29 ರಂದು ನಾಯಿಲ ಓಂ ಶ್ರೀ ಗೆಳೆಯರ ಬಳಗದಿಂದ “ಓಂ ಶ್ರೀ ಪರ್ಬ” ಎಂಬ ವಿನೂತನ ಕಾರ್ಯಕ್ರಮ
ಬಂಟ್ವಾಳ:ತಾಲೂಕಿನ ನರಿಕೋಂಬು ಗ್ರಾಮದ ನಾಯಿಲ ಓಂ ಶ್ರೀ ಗೆಳೆಯರ ಬಳಗ ( ರಿ.) ಇದರ 19 ನೇ ವಾರ್ಷಿಕೋತ್ಸವ “ಓಂ ಶ್ರೀ ಪರ್ಬ” ಎಂಬ ವಿನೂತನ ಕಾರ್ಯಕ್ರಮವು ಮಾ.29 ರಂದು ಸಂಘದ ವಠಾರದಲ್ಲಿ ನಡೆಯಲಿದೆ ಎಂದು ಓಂ.ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕರಣ್ ಅಟ್ಲೂರು ತಿಳಿಸಿದ್ದಾರೆ.
ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ವಿಶ್ವಕಲ್ಯಾಣದ ಸತ್ ಚಿಂತನೆಗಾಗಿ “ಶ್ರೀ ಸತ್ಯನಾರಾಯಣ ಪೂಜೆ”,ಧಾರ್ಮಿಕ ಪರಂಪರೆಯ ಭಕ್ತಿ ಚಿಂತನೆಗಾಗಿ “ಕುಣಿತ ಭಜನಾ ಸ್ಪರ್ಧೆ” ಹಾಗೂ ಭಕ್ತಿ ಪ್ರಧಾನವಾಗಿರುವ ದೈವರಾಜೆ ಶ್ರೀ ಬಬ್ಬು ಸ್ವಾಮಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದುತಿಳಿಸಿದರು.

ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದಿಂದ ಆರಂಭಿಸಲಾಗುತ್ತಿರುವ ಆರೋಗ್ಯ ನಿಧಿ ಹಾಗೂ ವಿದ್ಯಾರ್ಥಿನಿಧಿಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಬೆಳಿಗ್ಗೆ 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 3 ಗಂಟೆಯಿಂದ ಕುಣಿತ ಭಜನಾ ಸ್ಪರ್ಧೆ,ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು,
ರಾತ್ರಿ 7 ಗಂಟೆಗೆ ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು ಅವರ ಅಧ್ಯಕ್ಷತೆಯಲ್ಲಿಸಭಾ ಕಾರ್ಯಕ್ರಮ ನಡೆಯಲಿದ್ದು,ಈ ಸಂದರ್ಭದಲ್ಲಿ ಸ್ಥಳೀಯ ಸಾಧಕ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ನಾಲ್ವರು ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಅನೇಕ ಗಣ್ಯರು ಸಭಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೆಳೆಯರ ಬಳಗದ ಪದಾಧಿಕಾರಿಗಳಾದ ರಾಜೇಶ್ ಮರ್ದೊಳಿ, ನಾಗೇಶ್ ಕುಲಾಲ್, ಕಮಲಾಕ್ಷ ಕೊಟ್ಟಾರಿ, ಓಂಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ನಳಿನಿ ಶುಭಕರ ಉಪಸ್ಥಿತರಿದ್ದರು.