ದಕ್ಷಿಣ ಕನ್ನಡದಲ್ಲಿ ತಾಯಂದಿರ ಮರಣ ಸಂಖ್ಯೆ ಇಳಿಕೆ

ರಾಜ್ಯದಲ್ಲಿ ತಾಯಂದಿರ ಮರಣ ಹೆಚ್ಚಾಗಿದೆ. ಇದರಿಂದ ರಾಜ್ಯದ ಆಂತಕ ಸೃಷ್ಟಿಯಾಗಿತ್ತು. ಆದರೆ ದಕ್ಷಿಣಕನ್ನಡದಲ್ಲಿ ಇದಕ್ಕೆ ಸಾಕರತ್ಮಕ ವರದಿಯಾಗಿದೆ. ಜಿಲ್ಲೆಯಲ್ಲಿ ತಾಯಂದಿರ ಮರಣ ಸಂಖ್ಯೆ ಬಹಳಷ್ಟು ಕಡಿಮೆ ಆಗಿದೆ. 2019 ರಲ್ಲಿ ಜಿಲ್ಲೆಯಲ್ಲಿ 19 ಗರ್ಭಿಣಿಯರು ಮತ್ತು 354 ಶಿಶುಗಳ ಮರಣಪ್ರಮಾಣ ದಾಖಲಾಗಿವೆ. ಐದು ವರ್ಷಗಳ ಅವಧಿಯಲ್ಲಿ, ಮಾರ್ಚ್ 2024 ರವರೆಗೆ, ತಾಯಂದಿರ ಮರಣಗಳ ಸಂಖ್ಯೆ 10 ಕ್ಕೆ ಇಳಿದಿದ್ದು, 300 ಶಿಶುಗಳ ಮರಣ ವರದಿಯಾಗಿವೆ. ಇಲಾಖೆಯ ಪ್ರಕಾರ, ರಕ್ತಹೀನತೆ ಅಥವಾ ಅಪೌಷ್ಟಿಕತೆಯಿಂದ ಯಾವುದೇ ಮಕ್ಕಳು ಸಾವನ್ನಪ್ಪಿಲ್ಲ. ತಾಯಂದಿರ ಮರಣದ ಪ್ರಾಥಮಿಕ ಕಾರಣಗಳಲ್ಲಿ ತೀವ್ರ ರಕ್ತಸ್ರಾವ, ಗರ್ಭಾಶಯದ ತೊಂದರೆಗಳು, ಅಕಾಲಿಕ ಜನನಗಳು ಮತ್ತು ಇತರ ಅನಿರೀಕ್ಷಿತ ವೈದ್ಯಕೀಯ ಪರಿಸ್ಥಿತಿಗಳು ಸೇರಿವೆ.