ಜನರೇ ಎಚ್ಚರ… ಬೆಲ್ಲದಲ್ಲೂ ಕೃತಕ ಬಣ್ಣ ಬಳಸಲಾಗಿದೆ

ಇಡ್ಲಿ, ಕಲ್ಲಂಗಡಿ, ಎಲ್ಲವೂ ಆಗಿತ್ತು. ಇದೀಗ ಬೆಲ್ಲ ಕೂಡ ಆರೋಗ್ಯ ಹಾನಿಕರಕ ಎಂದು ಹೇಳಲಾಗಿದೆ. ಬೆಲ್ಲದಲ್ಲಿ ಕೂಡ ಅಪಾಯಕಾರಿ ರಾಸಾಯನಿಕ ಬಳಸುತ್ತಿರುವುದು ದೃಢಪಟ್ಟಿದೆ.ಬೆಲ್ಲ ಗೋಲ್ಡನ್ ಕಲರ್ನಲ್ಲಿ ಕಾಣಿಸುವ ಮೂಲಕ ಜನರನ್ನು ಸೆಳೆಯುವಂತೆ ಮಾಡಲು ಕೃತಕ ಬಣ್ಣ ಬೆರೆಸಲಾಗುತ್ತಿದೆ ಗೋಲ್ಡನ್ ಕಲರ್ನಲ್ಲಿ ಕಾಣಿಸುವ ಬೆಲ್ಲದತ್ತ ಜನ ಆಕರ್ಷಿತರಾಗುತ್ತಾರೆ. ಆದರೆ ರಾಸಾಯನಿಕ ಬೆಲ್ಲ ಆರೋಗ್ಯದ ಮೇಲೆ ಅಡ್ಡ ಪರಿಣಾಮಕ್ಕೆ ಕಾರಣವಾಗಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಕರ್ನಾಟಕದ ವಿವಿಧ ಕಡೆಗಳಲ್ಲಿ ಆಹಾರ ಇಲಾಖೆ ಬೆಲ್ಲದ ಮಾದರಿಗಳನ್ನು ಸಂಗ್ರಹ ಮಾಡಿತ್ತು. ಆ ಸ್ಯಾಂಪಲ್ಸ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ವರದಿ ಬಯಾಲಾಗಿದೆ. ಸ್ಯಾಂಪಲ್ಗಳಲ್ಲಿ ಕಲರ್ ಏಜೆಂಟ್ ಹಾಗೂ ಸಲ್ಫರ್ ಡೈಆಕ್ಸೈಡ್ ದೃಢಪಟ್ಟಿವೆ.