ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ಎಸ್ಕೆಪಿಎ) ಮೂಡುಬಿದರೆ ವಲಯದ ಪದಪ್ರದಾನ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸೋಮವಾರ ರಾತ್ರಿ ಸಮಾಜಮಂದಿರದಲ್ಲಿ ನಡೆಯಿತು.
ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ ವಿವೇಕ್ ಸಿಕ್ವೇರಾ ಕಾರ್ಯಕ್ರಮ ಉದ್ಘಾಟಿಸಿದರು. ಫೋಟೋಗ್ರಾಫರ್ ಯಾವ ಕ್ಯಾಮರ ಉಪಯೋಗಿಸುತ್ತಾನೆ ಎಂಬುವುದು ಮುಖ್ಯವಲ್ಲ. ವೃತ್ತಿಯಲ್ಲಿ ಅವನ ಪ್ರಬುದ್ಧತೆ, ವಸ್ತು ಆಯ್ಕೆಯಲ್ಲಿ ಹಿಡಿತ, ಉಪಯೋಗಿಸುವ ಕೋನಗಳು ಆತನ ಸಾಮಥ್ರ್ಯವನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬ ಫೋಟೋಗ್ರಾಫರ್ ಕ್ಷೇತ್ರಕ್ಕೆ ಪೂರಕವಾದ ಜ್ಞಾನ-ತಂತ್ರಜ್ಞಾನಗಳನ್ನು ಕಲಿಯಬೇಕು.
mbd_dec8_8
ಫೋಟೋಗ್ರಾಫಿ ಬಗ್ಗೆ ಸರಿಯಾದ ಜ್ಞಾನವಿಲ್ಲದವರು ಫೋಟೋ ತೆಗೆಯುವುದರಿಂದ ಕ್ಷೇತ್ರದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದರು.
ಸನ್ಮಾನ: ಮೂಡುಬಿದರೆ ಪ್ರಭು ಆಸ್ಪತ್ರೆ ವೈದ್ಯ, ಹವ್ಯಾಸಿ ಫೋಟೋಗ್ರಾಫರ್ ಡಾ.ಕೃಷ್ಣ ಮೋಹನ್ ಪ್ರಭು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಪ್ರತಿದಿನ ಹೊಸ ತಂತ್ರಜ್ಞಾನಗಳು ಬರುತ್ತಿದೆ. ಮೂಲ ಕಲೆಯ ವಿಧದಲ್ಲಿ ಬದಲಾವಣೆಯಿಲ್ಲ. ಫೋಟೋಗ್ರಾಫರ್ ನಿರಂತರ ಕಲಿಕೆಯ ಕಲೆಯಾಗಿದ್ದು, ಕಲಿಕೆ ಮೂಲಕ ಫೋಟೋಗ್ರಾಫಿಯನ್ನು ಉತ್ತಮ ಪಡಿಸಬಹುದು ಎಂದು ಡಾ.ಕೃಷಮೋಹನ್ ಪ್ರಭು ತಿಳಿಸಿದರು.
ವಿಕಲಚೇತನ ದೇವದಾಸ್ ಎಡಪದವು ಅವರಿಗೆ ಗಾಲಿಕುಚರ್ಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ರಶ್ಮಿ ಆಚಾರ್ಯ ಹೊಸಬೆಟ್ಟು ಅವರಿಗೆ ಸಹಾಯಧನ ವಿತರಿಸಲಾಯಿತು. ವಿವಿಧ ವಲಯದ ಪ್ರತಿನಿಧಿಗಳನ್ನು ಗೌರವಿಸಲಾಯಿತು. ವಿವಿಧ ಯೋಜನೆಗಳಿಗೆ ಆಥರ್ಿಕ ನೆರವಿಗಾಗಿ ಅದೃಷ್ಟ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು. ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಸ್ಕೆಪಿಎ ಅವಿಭಜಿತ ದ.ಕ ಜಿಲ್ಲಾ ಅಧ್ಯಕ್ಷ ವಾಸುದೇವ ರಾವ್ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಸಂಘಟನಾ ಕಾರ್ಯದಶರ್ಿ ಸಂತೋಷ್ ಕುಮಾರ್ ಶೆಟ್ಟಿ, ಎಸ್ಕೆಪಿಎ ಮೂಡುಬಿದರೆ ವಲಯದ ಗೌರವಾಧ್ಯಕ್ಷ ಭಾನುಪ್ರಕಾಶ್ ಉಪಸ್ಥಿತರಿದ್ದರು.
ಎಸ್ಕೆಪಿಎ ಮೂಡುಬಿದರೆ ವಲಯಾಧ್ಯಕ್ಷ ವಿಲ್ಫ್ರೇಡ್ ಮೆಂಡೋನ್ಸಾ ಸ್ವಾಗತಿಸಿದರು. ಕಾರ್ಯದಶರ್ಿ ಮಣೀಂದ್ರ ವರದಿ ವಾಚಿಸಿದರು. ನಿತಿನ್ ಕುಮಾರ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ಇಕ್ಬಾಲ್ ಶೇಖ್ ಸನ್ಮಾನಿತರ ಪರಿಚಯ ಮಾಡಿದರು.
ನೂತನ ಪದಾಧಿಕಾರಿಗಳು: ಭಾನುಪ್ರಕಾಶ್ ರಾವ್(ಗೌರವಾಧ್ಯಕ್ಷ), ವಿಲ್ಫ್ರೇಡ್ ಮೆಂಡೋನ್ಸಾ (ಅಧ್ಯಕ್ಷ), ರಾಜೇಶ್ ಎಸ್. ಅಮೀನ್, ಉದಯಕುಮಾರ್ ಭಟ್( ಉಪಾಧ್ಯಕ್ಷ), ಸಂತೋಷ್ ಕುಮಾರ್ ಶೆಟ್ಟಿ (ಪ್ರಧಾನ ಕಾರ್ಯದಶರ್ಿ), ಹರೀಶ್ ಆಚಾರ್ಯ(ಜೊತೆ ಕಾರ್ಯದಶರ್ಿ), ಇಕ್ಬಾಲ್ ಶೇಖ್ ಪುತ್ತಿಗೆ(ಕೋಶಾಧಿಕಾರಿ), ಭಾಸ್ಕರ್ ಕೋಟ್ಯಾನ್( ಸಾಂಸ್ಕೃತಿಕ ಕಾರ್ಯದಶರ್ಿ), ನಿತಿನ್ ಕುಮಾರ್ (ಸಂಘಟನಾ ಕಾರ್ಯದಶರ್ಿ), ಸಮೀರ್,ಸುನೀಲ್ ಕೋಟ್ಯಾನ್( ಕ್ರೀಡಾ ಕಾರ್ಯದಶರ್ಿ) ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಹಾಗೂ ಕೇಂದ್ರ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *