ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ: ಸರ್ಕಾರದ ಯೋಜನೆಗಳನ್ನು ಕೊಂಡಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ್ದಾರೆ.ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಉಭಯ ಸದನಗಳೆದುರು ಮಂಡಿಸಿದರು. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಧಿವೇಶನ ಜನವರಿ 31 ರಿಂದ ಏಪ್ರಿಲ್ 4 ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಅಧಿವೇಶನದ ಮೊದಲ ಭಾಗ ಫೆ.13ಕ್ಕೆ ಕೊನೆಗೊಳ್ಳಲಿದ್ದು, ಎರಡನೇ ಭಾಗ ಮಾರ್ಚ್ 10ರಿಂದ ಆರಂಭವಾಗಲಿದೆ.
ರಾಷ್ಟ್ರಪತಿ ಭಾಷಣದ ಪ್ರಮುಖಾಂಶಗಳು
ಮಹಿಳಾ ಸಬಲೀಕರಣಕ್ಕೆ ಒತ್ತು
ಎಂಎಸ್‌ಎಂಇಗಳಿಗೆ ಸರ್ಕಾರ ಸಾಲ ಖಾತರಿ ಯೋಜನೆಯನ್ನು ತರುತ್ತಿದೆ
ಮಧ್ಯಮ ವರ್ಗದವರಿಗಾಗಿ ಸರ್ಕಾರ ಕೆಲಸ ಮಾಡಿದೆ
ಯುವಕರ ಉದ್ಯೋಗಕ್ಕೆ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ
ಸರ್ಕಾರದ ಯೋಜನೆಗಳ ಮೂಲಕ ದೇಶದ ಬಡವರು ಸಬಲರಾಗುತ್ತಿದ್ದಾರೆ