ಶ್ರೀಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ ನೇಮೋತ್ಸವ
ಕೈಕಂಬ:ಅಡ್ಡೂರು ಬರ್ಕೆಮನೆ ಗ್ರಾಮದೈವ ಶ್ರೀಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ಜನವರಿ ೩೧ರಂದು ಶುಕ್ರವಾರದಿಂದ ಫೆಬ್ರವರಿ ೧ ಶನಿವಾರದವರೆಗೆ ನಡೆಯಲಿದೆ.

ಜ.೩೦ರಂದು ಗುರುವಾರ ಬರ್ಕೆಮನೆ ಧರ್ಮದೈವಗಳ ಚಾವಡಿಯಲ್ಲಿ ವಾರ್ಷಿಕ ಅಗೇಲು ಸೇವೆ ಜ,೩೧ರಂದು ಶುಕ್ರವಾರ ಸಂಜೆ ಬರ್ಕೆಮನೆ ಧರ್ಮಚಾವಡಿಯ ದೈವಗಳಿಗೆ ಹೋಮ,ಪಂಚಕಜ್ಜಾಯ ಸಂಜೆ ೫ ಗಂಟೆಗೆ ಕೋರ‍್ದಬ್ಬು ದೈವದ ಭಂಡಾರ ಏರುವುದು.
ಸಂಜೆ ೬ಗಂಟೆಯಿಂದ ಶ್ರೀ ವಿಠಲ್ ನಾಯಕ್ ಇವರಿಂದ ವಿನೂತನ ಕಾರ್ಯಕ್ರಮ ಗೀತಾ-ಸಾಹಿತ್ಯ-ಸಂಭ್ರಮ ಬಿಲ್ಲವ ಬಿ.ಗ್ರೇಡ್ ಸಂಸ್ಥಾಪಕರು ಶ್ರೀ ಸದಾನಂದ ಪೂಜಾರಿ ಮುಂಡಾಜೆ ಪ್ರಾಯೋಜಕತ್ವದಲ್ಲಿ ನಡೆಯಲಿದೆ.
ರಾತ್ರಿ ೯ .ರಿಂದ ಅನ್ನ ಸಂತರ್ಪಣೆ. ರಾತ್ರಿ ೯.೩೦ ರಿಂದ ಗ್ರಾಮದೈವ ಶ್ರೀ ಕೋರ‍್ದಬ್ಬು ತನ್ನಿಮಾನಿಗಳ ದೈವಗಳ ನೇಮೋತ್ಸವ ಫೆ.೧ರಂದು ಶನಿವಾರ ರಾತ್ರಿ ೯ಗಂಟೆಗೆ ಗುಳಿಗ,ಪಂಜುರ್ಲಿದೈವಗಳ ನೇಮೋತ್ಸವ ನಡೆಯಲಿದೆ.