ಕಾರಮೊಗರಿನಲ್ಲಿ `ಶ್ರೀ ಅಗ್ನಿದುರ್ಗಾ ಚಾವಡಿ’ ನಿರ್ಮಾಣ
ಮೇ ತಿಂಗಳಲ್ಲಿ ಸಭಾಂಗಣ ಲೋಕಾರ್ಪಣೆ, ನೇಮೋತ್ಸವ
ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕಾರಮೊಗರಿಗೆ ಹತ್ತಿರದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿ ತೀರದಲ್ಲಿ ರಾರಾಜಿಸುತ್ತಿರುವ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲ ಭೈರವ ದೇವಸ್ಥಾನದ ಪಕ್ಕದಲ್ಲಿ ಬಡವರ್ಗದವರ ಸಹಿತ ಮಧ್ಯಮ ವರ್ಗದ ಕುಟುಂಬಿಕರ ಮದುವೆ ಇತ್ಯಾದಿ ಸಭೆ-ಸಮಾರಂಭ ಆಯೋಜಿಸಲು ಯೋಗ್ಯವೆನಿಸಿರುವ ಸುಂದರ ಹಾಗೂ ಸುಸಜ್ಜಿತ `ಶ್ರೀ ಅಗ್ನಿದುರ್ಗಾ ಚಾವಡಿ’ ಕನ್ವೆನ್ಶನ್ ಸೆಂಟರ್ ನಿರ್ಮಾಣಗೊಳ್ಳುತ್ತಿದೆ.

ಬಹುತೇಕ ಕಾಮಗಾರಿ ಪೂರ್ಣಗೊಂಡಿರುವ ನೂತನ ಸೆಂಟರ್ ಮೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದೇ ಹೊತ್ತಿಗೆ ಸಾನಿಧ್ಯದಲ್ಲಿರುವ ಶ್ರೀ ವೈದ್ಯನಾಥ ಹಾಗೂ ಪರಿವಾರ ದೈವಗಳಿಗೆ ಸಿರಿಸಿಂಗಾರ ನೇಮೋತ್ಸವ ನಡೆಯಲಿದೆ.

ರಾಷ್ಟಿçÃಯ ಹೆದ್ದಾರಿ ೧೬೯ರ ಗುರುಪುರ ಬಂಡಸಾಲೆಯಿಂದ ಹಾಗೂ ವಿಸ್ತರಣೆಗೊಳ್ಳುತ್ತಿರುವ ಈ ಹೆದ್ದಾರಿಯ ಪೊಳಲಿ ಭಾಗದಿಂದ ಶ್ರೀ ಅಗ್ನಿದುರ್ಗಾ ದೇವಸ್ಥಾನಕ್ಕೆ ಸುಮಾರು ೧೫ ನಿಮಿಷದ ನೇರ ರಸ್ತೆ ಇದೆ. ದೇವಸ್ಥಾನದ ಪಕ್ಕದಲ್ಲೇ ಸುಸಜ್ಜಿತ ಸೆಂಟರ್ ನಿರ್ಮಾಣಗೊಳ್ಳುತ್ತಿದೆ.

ಮಣಿಪಾಲದ ಎಂಐಟಿಯಲ್ಲಿ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್, ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಗಡಿಕಾರ ಆಗಿರುವ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು ಅವರು ಈ ಸೆಂಟರ್ ನಿರ್ಮಾಣದ ರೂವಾರಿಯಾಗಿದ್ದಾರೆ.
ಸುಮಾರು ೪೦೦೦ ಚದರ ಅಡಿ ವಿಸ್ತೀರ್ಣ ಜಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಸೆಂಟರ್ ತೆರೆದ ಸಭಾಂಗಣವಾಗಿ ಗಮನಸೆಳೆಯುತ್ತಿದೆ. ಸುಮಾರು ೫೦೦ ಮಂದಿ ಕುಳಿತುಕೊಳ್ಳಲು ಅವಕಾಶವಿರುವ ಸಭಾಂಗಣದ ವಿಶಾಲ ವೇದಿಕೆಯ ಇಕ್ಕೆಲದಲ್ಲಿ ೨ ಡ್ರೆಸಿಂಗ್ ರೂಮ್‌ಗಳಿವೆ. ಬಾತ್‌ರೂಮ್, ಅಡುಗೆ ಕೋಣೆ, ಕಚೇರಿ, ಸ್ವಾಗತ ಕೊಠಡಿ ಒಳಗೊಂಡಿರುವ ಸಭಾಂಗಣದ ಪಕ್ಕದಲ್ಲಿರುವ ವಿಶಾಲ ಖಾಲಿ ಜಾಗದ ಸದ್ಭಳಕೆಗೆ ಅವಕಾಶವಿದೆ. ಅಂದರೆ, ಸಭಾಂಗಣ ಮತ್ತು ಹೊರ ಭಾಗದಲ್ಲಿ ಏಕಕಾಲಕ್ಕೆ ಸುಮಾರು ೮೦೦-೧,೦೦೦ ಮಂದಿ ಜಮಾಯಿಸಲು ಸಾಧ್ಯವಿದೆ.
ನದಿ ತೀರವಾಗಿರುವುದರಿಂದ ಸುತ್ತಲೂ ನೆರಳಿನಾಸರೆ ಇದ್ದು, ಹಚ್ಚ ಹಸಿರಿಂದ ತಂಗಾಳಿಗೆ ಬರವಿಲ್ಲ. ವಾಹನ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವಿದೆ. ಪ್ರಶಾಂತ ವಾತಾವರಣವಿರುವ ಸಭಾಂಗಣದ ಹತ್ತಿರದಲ್ಲೇ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾ ಕಾಲಭೈರವ ದೇವರ ಸಾನಿಧ್ಯವಿದೆ.
“ತೀರಾ ಬಡ ಕುಟುಂಬದವರ ಹೆಣ್ಣು ಮಕ್ಕಳ ಮದುವೆಗೆ ಸಭಾಂಗಣ ಉಚಿತವಾಗಿ ನೀಡುವೆ. ಉಳಿದಂತೆ ಸಮಾಜದ ಎಲ್ಲ ವರ್ಗವದರಿಂದ ದುಬಾರಿಯಲ್ಲದ ರೀತಿಯಲ್ಲಿ ಸಭಾಂಗಣದ ಬಳಕೆಯಾಗಲಿದೆ. ಮೇ ತಿಂಗಳ ಮಧ್ಯ ಭಾಗದಲ್ಲಿ ನೂತನ ತೆರೆದ ಸಭಾಂಗಣ ಲೋಕಾರ್ಪಣೆಗೊಳ್ಳುವ ದಿನದಂದೇ ದೇವಸ್ಥಾನದಲ್ಲಿರುವ ಶ್ರೀ ವೈದ್ಯನಾಥ ಹಾಗೂ ಪರಿವಾರ ದೈವಗಳಿಗೆ ಸಿರಿಸಿಂಗಾರ ನೇಮೋತ್ಸವ ನಡೆಯಲಿದೆ” ಎಂದು ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು ಅವರು ತಿಳಿಸಿದರು.