ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿಯ ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಡಳಿತ ಮಂಡಳಿಯ ಮುಂದಿನ ಅವಧಿಯ ನೂತನ ಅಧ್ಯಕ್ಷರಾಗಿ ವೆಂಕಟೇಶ್ ನಾವಡ ಹಾಗೂ ಉಪಾಧ್ಯಕ್ಷರಾಗಿ ಗೋಪಾಲ್ ಅಂಚನ್ ಆಯ್ಕೆಯಾಗಿದ್ದಾರೆ.

ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಿರಿಸಿದ ಮತಕ್ಷೇತ್ರದಿಂದ ಪೊಳಲಿ ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪೊಳಲಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸುಕೇಶ್‌ ಚೌಟ, ವೆಂಕಟೇಶ್‌ ನಾವಡ, ಅಬುಬಕ್ಕರ್‌ ಡಿ.ಎ, ಗೋಪಾಲ್‌ ಅಂಚನ್‌, ಗೋಡ್‌ ಫಿ ಫೆರ್ನಾಂಡಿಸ್‌, ನಿರಂಜನಿ ಸಿ ಶೆಟ್ಟಿ, ಜಯಂತಿ, ಯಶವಂತ ಪೂಜಾತಿ, ಕರುಣಾಕರ ಆಳ್ವ, ಕರಿಯದ, ಲಕ್ಷ್ಮೀಶ ಶೆಟ್ಟಿ ಸ್ಪರ್ಧಿಸಿದ್ದರು. ಜನವರಿ 19 ರಂದು ನಡೆದಿದ್ದ ಈ ಆಡಳಿತ ಮಂಡಳಿ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟೇಶ್ ನಾವಡ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ  ಗೋಪಾಲ್ ಅಂಚನ್ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *