ಪೊಳಲಿ: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ಪಾದಯಾತ್ರೆ ಕೈಗೊಂಡ 56 ಅಯ್ಯಪ್ಪ ಮಾಲಾಧಾರಿಗಳು

ಶಬರಿಮಲೆ ಯಾತ್ರೆಗೆ ತೆರಳಲು ಎಲ್ಲೆಡೆ ಅಯ್ಯಪ್ಪ ವೃತದಾರಿಗಳು ಮಾಲಾಧಾರಣೆ ಮಾಡಿದ್ದು, ಮಕರ ಸಂಕ್ರಮಣಕ್ಕೆ ಶಬರಿಮಲೆಗೆ ತೆರಳಲು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಕೆಲವು ಅಯ್ಯಪ್ಪ ಮಾಲಾಧಾರಿಗಳು ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ನಡೆಸುತ್ತಿದ್ದಾರೆ. ಇದೀಗ ಕಣ್ಣು ತೆರೆದೆಯಾ ಅಯ್ಯಪ್ಪ ಭಜನಾ ತಂಡದ 56 ಅಯ್ಯಪ್ಪ ಮಾಲಾಧಾರಿಗಳು ಕೇವಲ ಕಾಲ್ನಡಿಗೆ ಮೂಲಕವೇ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.

ಈ ಅಯ್ಯಪ್ಪ ಭಕ್ತರು ಪೊಳಲಿಯ ಎಡಪದವಿನಿಂದ ಪಾದಯಾತ್ರೆ ಆರಂಭಿಸಿದ್ದು, ಗುರುವಾಯೂರ್ ತಲುಪಿದ್ದಾರೆ. ಈ ಅಯ್ಯಪ್ಪ ಮಾಲಾಧಾರಿಗಳು ಕಳೆದ ಕೆಲವು ವರ್ಷಗಳಿಂದ ಪಾದಾಯಾತ್ರೆಯ ಮೂಲಕ ಶಬರಿಮಲೆಗೆ ಹೋಗಿಬರುತ್ತಿದ್ದಾರೆ. ದೇವಸ್ಥಾನದಲ್ಲಿ ನಿತ್ಯ ಕರ್ಮ ಸೇರಿದಂತೆ ತಂಗಲು ವ್ಯವಸ್ಥೆ ಮಾಡಿಕೊಂಡು, ದಿನಕ್ಕೆ 35 ರಿಂದ 40 ಕಿಲೋಮೀಟರ್ ನಷ್ಟು ಪಾದಯಾತ್ರೆ ಮಾಡುತ್ತಿದ್ದಾರೆ.

ಈ ಪಾದಯಾತ್ರೆ ನಡುವೆ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಮಹಾಪೂಜೆ ಹಾಗೂ ಮೂರು ಹೊತ್ತು ಭಜನೆಯನ್ನು ನೆರವೇರಿಸಲಾಗುತ್ತದೆ. ಪಾದಯಾತ್ರೆಯ ವೇಳೆಯಲ್ಲಿ ವಿವಿಧ ದೇವಸ್ಥಾನಕ್ಕೆ ಬರುವ ಅಯ್ಯಪ್ಪ ಮಾಲಾಧಾರಿಗಳು ಇತರ ಭಕ್ತರಂತೆ ಸರತಿ ಸಾಲಿನಲ್ಲಿ ಸಾಗಬೇಕಿದೆ. ಹೌದು, ಪಾದಯಾತ್ರೆಯ ಮೂಲಕ ದೇವಸ್ಥಾನಕ್ಕೆ ಬರುವ ಅಯ್ಯಪ್ಪ ಮಾಲಾಧಾರಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿ ಕೊಡುವತ್ತ ಆಯಾ ಪ್ರದೇಶದ ದೇವಸ್ಥಾನ ಆಡಳಿತ ಮಂಡಳಿವು ಗಮನ ನೀಡಬೇಕಿದೆ.

ಕಣ್ಣು ತೆರೆದೆಯ ಅಯ್ಯಪ್ಪ ಕ್ಷೇತ್ರ ತೋಡಾರು ಮೂಡಬಿದ್ರೆ
ತೋಡಾರಿನಿಂದ ಹೊರಟ ಅಯ್ಯಪ್ಪ ವೃತಧಾರಿಗಳನ್ನು ಶಬರಿಮಲೆ ಯಾತ್ರೆ ಪಾದಯಾತ್ರೆಯ ಮೂಲಕ 56 ಅಯ್ಯಪ್ಪ ಮಾಲಾಧಾರಿಗಳನ್ನು ಗುರುಸ್ವಾಮಿಗಳಾದ ಅಶೋಕ್ ಗುರುಸ್ವಾಮಿ ಮತ್ತು ರಾಜೇಶ್ ಗುರುಸ್ವಾಮಿ ಸಾರಥ್ಯದಲ್ಲಿಸುಮಾರು 35ಕ್ಕೂ ಹೆಚ್ಚಿನ ದೇವಸ್ಥಾನ, ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಭಜನಾ ಸಂಕೀರ್ತನೆಯನ್ನು ಮಾಡಿ ಶಬರೀಶನ ಸನ್ನಿಧಿಗೆ 21 ದಿನಗಳ ಪಾದಯಾತ್ರೆ ಕೈಗೊಂಡಿದ್ದಾರೆ.
ಮಹಾಪಾದಯಾತ್ರೆ ಮಾಡಿದ ಅಯ್ಯಪ್ಪಸ್ವಾಮಿ ಭಕ್ತರು ಶಬರಿಮಲೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕೇ… ಏಕೆ?
ಮಹಾಪಾದಯಾತ್ರೆಯ ಮೂಲಕ ಶಬರಿಮಲೆಗೆ ಬರುವಂತಹ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ದೇವರ ದರ್ಶನಕ್ಕೆ ಯಾವುದೇ ವಿಶೇಷ ವ್ಯವಸ್ಥೆಇಲ್ಲ ಎನ್ನುತಾರೆ ರಾಜೇಶ್ ಗುರುಸ್ವಾಮಿ. ಪಾದಯಾತ್ರೆಯಲ್ಲಿ ಬರುವ ಸ್ವಾಮಿಗಳು ಕೂಡಾ ಸರತಿ ಸಾಲಿನಲ್ಲಿಯೇ ನಿಂತು ದೇವರ ದರ್ಶನವನ್ನು ಪಡೆಯಬೇಕಿದ್ದು, ಬೇರೆ ಬೇರೆ ರಾಜ್ಯಗಳಿಂದ ಪಾದಯಾತ್ರೆಯ ಮೂಲಕವೇ ಶಬರಿಮಲೆಗೆ ಬರುವ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದರೆ ತುಂಬಾ ಅನುಕೂಲಕರವಾಗುತ್ತದೆ ಎಂದು ಆಶೋಕ್ ಗುರುಸ್ವಾಮಿ ಸುದ್ದಿ9ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು. ಪೊಳಲಿಗೆ ಸಮೀಪದ ಮಣಿಕಂಠ ಭಜನಾ ಮಂದಿರದಿಂದ ಹೊರಟ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಬಳಿ ಮಹಾಪಾದಯಾತ್ರೆಯ ಮೂಲಕ ಬಂದ ಅಯ್ಯಪ್ಪ ವೃತಧಾರಿಗಳು ಹೇಳಿಕೊಂಡಿದ್ದಾರೆ. ಏನೇ ಆಗಲಿ ಮಹಾಪಾದಯಾತ್ರೆಯಲ್ಲಿ ಬರುವಂತಹ ವೃತಧಾರಿಗಳಿಗೆ ಶ್ರೀ ಕ್ಷೇತ್ರ ಶಬರಿಮಲೆಯ ಆಡಳಿತ ಮಂಡಳಿ ಇಲ್ಲಿಯ ಸರಕಾರ ಗಮನಿಸಿ ಹೆಚ್ಚಿನ ವೈವಸ್ಥೆ ಮಾಡಲಿ ಎಂದು ಹಾರೈಸುತ್ತೇವೆ “ಸ್ವಾಮಿಶರಣಂ ಅಯ್ಯಪ್ಪ”