ಪೊಳಲಿ: ಮಣಿಕಂಠ ಭಜನಾ ಮಂದಿರದಲ್ಲಿ ಭಜನಾ ಸಂಕೀರ್ತನೆ ಮತ್ತು ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮ
ಪೊಳಲಿ: ಪೊಳಲಿಯ ಮಣಿಕಂಠ ಭಜನಾ ಮಂದಿರದಲ್ಲಿ ಇಂದು ಅಂದರೆ ಜನವರಿ 4 ಮತ್ತು ನಾಳೆ ಜನವರಿ 5 ರಂದು 19 ನೇ ವರ್ಷದ ಭಜನಾ ಸಂಕೀರ್ತನೆ ಮತ್ತು ಅಯ್ಯಪ್ಪ ಸ್ವಾಮಿಯ ಮಹಾಪೂಜೆಯ ಕಾರ್ಯಕ್ರಮ ನಡೆಯಲಿದೆ.
ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೂತನ್ಯಾನಂದ ಸ್ವಾಮೀಜಿಯವರ ಆಶಿರ್ವಚನದೊಂದಿಗೆ ಇಂದು ಸಂಜೆ 6 ರಿಂದ ನಾಳೆ ಬೆಳಗ್ಗೆ 7 ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮತ್ತು P.W.D ಕಾಂಟ್ರಾಕ್ಟರ್ ಯಶೋಧರ ಪೊಳಲಿ ಕಲ್ಕುಟ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಲಿದ್ದಾರೆ.