ವಿದ್ಯಾರ್ಥಿ ದೆಸೆಯೆಲ್ಲೆ ಸನ್ನಡತೆಯನ್ನು ಮೈಗೂಡಿಸಿ: ಡಿವೈಎಸ್ಪಿ ಎಸ್. ವಿಜಯ ಪ್ರಸಾದ್
ಬಂಟ್ವಾಳ: ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ನಿಯಮಗಳನ್ನು ಪಾಲಿಸುವುದರೊಂದಿಗೆ ಸಾರ್ವತ್ರಿಕವಾದ ಕಾನೂನಿನ ಬಗ್ಗೆಯು ಅರಿತುಕೊಳ್ಳಬೇಕು ಭವಿಷ್ಯದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲು ಉತ್ತಮ ನಾಗರಿಕರೆನಿಸಿ ಬದುಕುವ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯೆಲ್ಲೆ ಸನ್ನಡತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಂಟ್ಟಾಳ ಉಪ ವಿಭಾಗದ ಡಿವೈಎಸ್ಪಿ ಎಸ್. ವಿಜಯ ಪ್ರಸಾದ್ ಹೇಳಿದರು.

ದ.ಕ. ಜಿಲ್ಲಾ ಪೋಲೀಸ್, ಬಂಟ್ಟಾಳ ಉಪ ವಿಭಾಗ, ರೋಟರಿ ಕ್ಲಬ್ ಮೊಡಂಕಾಪು, ನಮ್ಮ ನಾಡು ಬಂಟ್ಟಾಳ ಮತ್ತು ತುಂಬೆ ಪ.ಪೂ. ಕಾಲೇಜಿನಿನ ಸಹಯೋಗದೊಂದಿಗೆ ತುಂಬೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ “ ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಹೆಣ್ಣು ಮಕ್ಕಳ ದೌರ್ಜನ್ಯ ತಡೆ “ ಯ ಬಗ್ಗೆ ಅರಿವು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ದುಶ್ಚಟಗಳಿಗೆ ಒಮ್ಮೆ ದಾಸನಾದರೆ ಅದರಿಂದ ಮುಕ್ತಿ ಹೊಂದಲು ಸಾಧ್ಯವೇ ಇಲ್ಲ. ಹಾಗಾಗಿ ದುಶ್ಚಟಗಳಿಂದ ದೂರವಿರಬೇಕು ಎಂದ ಅವರು ಅಪ್ರಾಪ್ತ ವಯಸ್ಸಿನ ಯುವಕರು ಸಾರಿಗೆ ಇಲಾಖಾ ನಿಯಮವನ್ನು ಉಲ್ಲಂಘಿಸುವುದು, ಸೈಬರ್ ಅಪರಾಧಿಗಳಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಒಮ್ಮೆ ಹೆಸರು ಕ್ರಿಮಿನಲ್ ರೆಕಾರ್ಡ್ ನಲ್ಲಿ ದಾಖಲಾದರೆ ಮುಂದೆ ಅವರು ಅನೇಕ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದುಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ವಿ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು.ನಮ್ಮ ನಾಡು ಬಂಟ್ಟಾಳ ಘಟಕದ ಅಧ್ಯಕ್ಷ ರೊ.ಪಿ.ಎ.ರಹೀಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಂಟ್ಟಾಳ ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ರೊ.ಅಲೆಗ್ಸಾಂಡರ್ ಲೋಬೋ, ನಮ್ಮ ನಾಡು ಒಕ್ಕೂಟದ ಸದಸ್ಯ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ಕವಿತಾ ಕೆ. ಸ್ವಾಗತಿಸಿದರು. ಉಪನ್ಯಾಸಕಿ ವೀಣಾ ಎಂ. ವಂದಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.