ಫರಂಗಿಪೇಟೆ :ಜ. 25-26,ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಕು. ಹಾರಿಕಾ ಮಂಜುನಾಥ್ ರಿಂದ ಧಿಕ್ಸೂಚಿ ಭಾಷಣ
ಬಂಟ್ವಾಳ : ಫರಂಗಿಪೇಟೆ ವಿಜಯನಗರದಲ್ಲಿ ಸ್ಥಳೀಯ 6 ಗ್ರಾಮಗಳನ್ನೊಳಗೊಂಡು ನೂತನವಾಗಿ ನಿರ್ಮಾಣಗೊಂಡ ಶ್ರೀ ಆಂಜನೇಯ ದೇವಸ್ಥಾನಕ್ಕೆ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಮೊದಲ ಪ್ರತಿಷ್ಠಾ ವರ್ಧಂತಿ ಉತ್ಸವವು ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.25 – 26 ರಂದು ನಡೆಯಲಿದೆ ಎಂದು ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿಯ ಅಧ್ಯಕ್ಷ ಧನರಾಜ್ ಶೆಟ್ಟಿ ತೇವು ಅವರು ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು
ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಜ.25 ನೇ ಸೂರ್ಯೋದಯದಿಂದ ಸೂರ್ಯಾಸ್ತದ ತನಕ 48 ದಿನಗಳ ಸಂಧ್ಯಾ ಭಜನಾ ಸೇವೆಯ ಮಂಗಲೋತ್ಸವದ ಪ್ರಯುಕ್ತ ಅರ್ಧ ಏಕಾಹ ಭಜನೆ ನಡೆಯಲಿದ್ದು,ಬೆಳಿಗ್ಗೆ 6.45ಕ್ಕೆ ಮಂಗಳೂರಿನ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ದೀಪ ಪ್ರಜ್ವಲನಗೈದು ಚಾಲನೆ ನೀಡಲಿದ್ದಾರೆ ಎಂದರು.
ರಾತ್ರಿ 7 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ಬಳಿಕ ಚಾ..ಪರ್ಕ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಜ.26 ರಂದು ಪ್ರಾತಃಕಾಲ ವಿವಿಧ ವೈದಿಕ ವಿಧಿವಿಧಾನಗಳು ನಡೆಯಲಿದೆ.ಬಳಿಕ ರವೀಂದ್ರ ಪ್ರಭು ಮತ್ತು ಬಳಗದಿಂದ ಭಕ್ತಿ ಗೀತಾಮೃತ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಯುವ ವಾಗ್ಮಿ ಕು. ಹಾರಿಕಾ ಮಂಜುನಾಥ್ ಬೆಂಗಳೂರು ಇವರು ಧಿಕ್ಸೂಚಿ ಭಾಷಣ ಮಾಡಲಿದ್ದಾರೆ.ಇದೇ ವೇಳೆ ಸಹಕಾರರತ್ನ ಪುರಸ್ಕೃತರಾದ ರವೀಂದ್ರ ಕಂಬಳಿ ಅವರನ್ನು ಸನ್ಮಾನಿಸಲಾಗುತ್ತದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ತದನಂತರ ಮಲ್ಲೂರು ಶ್ರೀ ರಾಮಕೃಷ್ಣ ಬಾಲಗೋಕುಲ ತಂಡದವರಿಂದ ನೃತ್ಯ ವೈಭವ, 6 ಗ್ರಾಮಗಳ ಪ್ರತಿಭಾನ್ವಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ 8.00ರಿಂದ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಗಾಂಭಿರ ಸುಜೀರುಗುತ್ತು, ಪ್ರ.ಕಾರ್ಯದರ್ಶಿ ಕರುಣಾಕರ ಕೊಟ್ಟಾರಿ, ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ಸಂದೇಶ್ ದಾರಿಬಾಗಿಲು, ಉಪಸ್ಥಿತರಿದ್ದರು.