ಜ.31 – ಫೆ.03 ಬಂಟ್ವಾಳದಲ್ಲಿ ಶ್ರೀ ನಿತ್ಯಾನಂದ, ಗೋವಿಂದ ಸ್ವಾಮೀಜಿಯವರ ವಿಗ್ರಹ ಪ್ರತಿಷ್ಠಾ ವರ್ಧಂತಿ ಉತ್ಸವ
ಬಂಟ್ವಾಳ: ಇಲ್ಲಿನ ಬೈಪಾಸ್ ರಸ್ತೆಯನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ ಶ್ರೀ ಸದ್ಗುರು ಗೋವಿಂದ ಸ್ವಾಮೀಜಿಯವರ ಮಹಾಸಮಾಧಿಯ 31ನೇ ವರ್ಷದ ಆರಾಧನ ಮಹೋತ್ಸವ. ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮೀಜಿಯವರ ದ್ವಿತೀಯ ವರ್ಷದ ವಿಗ್ರಹ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ 52ನೇ ವಾರ್ಷಿಕ ಭಜನಾ ಮಹೋತ್ಸವವು ಜ.31ರಿಂದ ಫೆ. 03 ರ ವರೆಗೆ ನಡೆಯಲಿದೆ ಎಂದು ಮಂದಿರದ ಆಡಳಿತ ಸಮಿತಿ ಅಧ್ಯಕ್ಷರಾದ ದಿನೇಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಜ್ಜ ಶಿವಕ್ಷೇತ್ರದ ವೇ.ಮೂ. ಶ್ರೀ ಸತ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.ಜ.31 ರಂದು ಶ್ರೀ ಸದ್ಗುರು ಗೋವಿಂದ ಸ್ವಾಮೀಜಿಯವರ ಮಹಾಸಮಾಧಿಯ 31ನೇ ವರ್ಷದ ಆರಾಧನ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಭಜನಾ ಕಾರ್ಯಕ್ರಮ ಬಳಿಕ ಮಹಾಪೂಜೆ,ಅನ್ನಸಂತರ್ಪಣೆ,ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ,ಬಳಿಕ ಸಮಾಊಹಿಕ ಶ್ರೀ ದುರ್ಗಾನಮಸ್ಕಾರ ಪೂಜೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 1 ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ.ಮಧ್ಯಾಹ್ನದ ಬಳಿಕ ಭಜನಾಕಾರ್ಯಕ್ರಮ, ಸಂಜೆ ಇರುವೈಲ್ ಶ್ರೀ ದುರ್ಗಾಪರಮೇಶ್ವರೀ ಭಜನಾ ತಂಡದಿಂದ ವಿಶಿಷ್ಠ ರೀತಿಯ ಭಜನಾ ಸಂಕೀರ್ತನೆ ಜರಗಲಿದೆ.
ಫೆ.2 ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮೀಜಿಯವರ ದ್ವಿತೀಯ ವರ್ಷದ ವಿಗ್ರಹ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ 52ನೇ ವಾರ್ಷಿಕ ಭಜನಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಸ್ವಾಮೀಜಿದ್ವಯರ ವಿಗ್ರಹಗಳಿಗೆ ಭಕ್ತಾದಿಗಳಿಂದ ಸೀಯಾಳಾಭಿಷೇಕ,ವಿವಿಧ ಭಜನಾ ತಂಡಗಳಿಂದ ಭಜನೆ,ಮಧ್ಯಾಹ್ನ ಅಲಂಕಾರ, ಮಹಾಪೂಜೆ,ಅನ್ನಸಂತರ್ಪಣೆ ಜರಗಲಿದೆ.ರಾತ್ರಿ ನಗರ ಭಜನೆ ನಡೆಯಲಿದೆ ಫೆ.3 ರಂದು ಬೆ.6 ಗಂಟೆಗೆ ಭಜನಾ ಮಂಗಲೋತ್ಸವ ಜರಗಲಿದೆ ಎಂದು ದಿನೇಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರಡ.