ಭರತನಾಟ್ಯ ವಿದ್ವತ್ ಅಂತಿಮ ವಿಭಾಗದ ಪರೀಕ್ಷೆ ಪೂರೈಸಿದ ಶ್ರೀನಿಧಿ ಎಸ್. ಸುವರ್ಣ

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ 2023-24 ನೇ ಸಾಲಿನ ವಿಶೇಷ ನೃತ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯನ್ನು ಶ್ರೀನಿವಾಸ್ ಸುವರ್ಣ ಮಲ್ಲೂರು ಮತ್ತು ಶ್ರೀಮತಿ ಕೃಪಾ ಶ್ರೀನಿವಾಸ್ ದಂಪತಿಯ ಪುತ್ರಿ ಶ್ರೀನಿಧಿ ಎಸ್. ಸುವರ್ಣ ಯಶಸ್ವಿಯಾಗಿ ಪೂರೈಸಿದ್ದಾರೆ.
ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಸಂಸ್ಥೆಯ ನೃತ್ಯ ಗುರು ವಿದುಷಿ ಚಿತ್ರಾಕ್ಷಿ ಅಜಿತ್ ಕುಮಾರ್ ಇವರ ಶಿಷ್ಯೆಯಾದ ಶ್ರೀನಿಧಿ ಎಸ್ ಸುವರ್ಣ ಭರತನಾಟ್ಯ ವಿದ್ವತ್ ಅಂತಿಮ ವಿಭಾಗದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಪ್ರಸ್ತುತ ಶ್ರೀನಿಧಿ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.