ಬೆಂಗಳೂರು: ಕರ್ನಾಟಕದಲ್ಲಿ ಬಿಯರ್ ಬೆಲೆಯಲ್ಲಿ ಮತ್ತೆ ಏರಿಕೆ ಮಾಡಿ ಸರ್ಕಾರ ಆದೇಶ ನೀಡಿದೆ. ರಾಜ್ಯ ಸರ್ಕಾರದ ಬಜೆಟ್​​​ಗೂ ಮುನ್ನ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಆದರೆ ಎಲ್ಲಾ ಬ್ರ್ಯಾಂಡ್‌ನ ಬಿಯರ್‌ಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಜನಸಾಮಾನ್ಯರ ಪಾಲಿಗೆ ಕೈಗೆಟುವ 300 ರೂ. ಒಳಗಡೆ ಇರುವ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಿದೆ. ಜನಪ್ರಿಯ ಬ್ರ್ಯಾಂಡ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಹಲವು ಬಿಯರ್‌ಗಳ ಬೆಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ದರ ಏರಿಕೆ ಮಾಡಿದಂತಾಗಿದೆ.

6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಆಗಿತ್ತು. ಹೀಗಾಗಿ ಇದೀಗ ಸಿದ್ದರಾಮಯ್ಯ ಸರ್ಕಾರ ಬಿಯರ್ ಮೇಲಿನ ಸುಂಕ ಹೆಚ್ಚಳ ಮಾಡಿದೆ. ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ‌ ಹೆಚ್ಚಳ ಮಾಡಿದೆ. ಕಳೆದ ಒಂದೇ ವರ್ಷದಲ್ಲಿ ಕರ್ನಾಟಕದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಅಲ್ಲದೇ ಕಾಂಗ್ರೆಸ್​ ಸರ್ಕಾರ ಬಂದಾಗಿನಿಂದ ಒಟ್ಟು ಐದು ಬಾರಿ ಬಿಯರ್ ದರ ಏರಿಕೆ ಮಾಡಿದೆ.

ಲಜೆಂಡ್‌ ಬಿಯರ್‌ ಮೊದಲು 100 ರೂಪಾಯಿಗೆ ಸಿಗುತ್ತಿತ್ತು. ಇದರಲ್ಲಿ 45 ರೂಪಾಯಿ ಏರಿಕೆಯಾಗಿದೆ. ಇನ್ನು ಪವರ್‌ಕೂಲ್‌ ಹೆಸರಿನ ಬಿಯರ್‌ಗೆ ಈ ಹಿಂದೆ 130 ರೂಪಾಯಿ ಬೆಲೆ ಇತ್ತು. ಇಂದಿನಿಂದ 155 ರೂಪಾಯಿಗೆ ಹೆಚ್ಚಳವಾಗಿದೆ.

By suddi9

Leave a Reply

Your email address will not be published. Required fields are marked *