ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿಯ ದಶಮಾನೋತ್ಸವದ ಆಮಂತ್ರಣ ಪತ್ರ ಬಿಡುಗಡೆ
ಪೊಳಲಿ: ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿ ಈ ಸಂಸ್ಥೆಯು ಶೈಕ್ಷಣಿಕ ,ಆರೋಗ್ಯ,ಧಾರ್ಮಿಕ, ಸಾಂಸ್ಕೃತಿಕ,, ಸಾಮಾಜಿಕ ಕ್ಷೇತ್ರದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಸೇವೆಸಲ್ಲಿಸಿ ಇದೀಗ ಹತ್ತನೇ ವರ್ಷದ ಸಂಭ್ರಮಾಚರಣೆಯ ಆಮಂತ್ರಣ ಪತ್ರವನ್ನು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸರ್ವಮಂಗಳಾ ಹಾಲ್ ನಲ್ಲಿ ಬುಧವಾರ ಬಿಡುಗಡೆಗೊಂಡಿತು.

ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ದಶಮಾನೋತ್ಸವದ ಲಾಂಛನ ಬಿಡುಗಡೆಗೊಳಿಸಿದರು.

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ನಾರಾಯಣ ಭಟ್ ದೀಪಬೆಳಗಿಸಿ ಉದ್ಘಾಟಿಸಿದರು.
ದಶಮಾನೋತ್ಸವ ಸಂಭ್ರಮವು 2025 ಫೆಬ್ರವರಿ 15ರಂದು ಶನಿವಾರ ಬೆಳಗ್ಗೆ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭಾಕಾರ್ಯಕ್ರಮ, “ಪೊಳಲಿ ನೈಟ್ಸ್” ಚೈತನ್ಯ ಕಲಾವಿದರು ಬೈಲೂರು ಪ್ರಸನ್ನ ಶೆಟ್ಟಿ ಬೈಲೂರು ಇವರ ಸಾರಥ್ಯದಲ್ಲಿ ಸಾಂಸಾರಿಕ ತುಳು ನಾಟಕ “ಅಷ್ಟೆಮಿ” ಸನ್ಮಾನ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ,ಸುಬ್ರಾಯ ಕಾರಂತ,ವಿಘೇಶ್ ಭಟ್ ,ಮೋಹನ್‌ದಾಸ್ ಪೊಳಲಿ,ಸಂತೋಷ್ ಶೆಟ್ಟಿ ಪೊಳಲಿ, ಕೇಶವ ಪೊಳಲಿ, ಧರ್ಮಜ್ಯೋತಿ ಫ್ರೆಂಡ್ಸ ಇದರ ಅಧ್ಯಕ್ಷ ಸೂರಜ್ ಕಲ್ಕುಟ, ಯಶವಂತ ಕೋಟ್ಯಾನ್ ಪೊಳಲಿ , ನಿವೃತ ಯೋಧ ಅನೀಶ್ ಆಚಾರ್ಯ, ನಾರಾಯಣ ಪೂಜಾರಿ ಪೊಳಲಿ,
ಎಸ್ ಆರ್ ಹಿಂದೂ ಫ್ರೆಂಡ್ಸ ಇದರ ಅಧ್ಯಕ್ಷ ಅಜಿತ್ ಪೊಳಲಿ,ಉದಯ ಪೂಜಾರಿ, ಕೃಷ್ಣಪ್ಪ ದೇವಾಡಿಗ, ಶಿವಪ್ರಸಾದ್ ಶೆಟ್ಟಿ ಹಾಗೂ ಎಸ್ ಅರ್ ಹಿಂದೂ ಫ್ರೆಂಡ್ಸ ಇದರ ಸದಸ್ಯರು ಉಪಸ್ಥಿತರಿದ್ದರು. ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.