ಬಂಟ್ವಾಳ: ಎ.ಜೆ ಗ್ರಾಮೀಣ ತರಬೇತಿ ಕೇಂದ್ರ, ಮೆಲ್ಕಾರ್ ಎ.ಜೆ ಸಮುದಾಯ ವಿಭಾಗ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ.ಸಿ.ರೋಡ್, ಇವರ ಸಂಯುಕ್ತ ಆಶ್ರಯದಲ್ಲಿ ಕಡಿಮೆ ತೂಕದ ಮಕ್ಕಳ ತಪಾಸಣಾ ಶಿಬಿರ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಗುಣಾವತಿ ಅವರು ಶಿಬಿರದ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಜೆ. ಸಮುದಾಯ ಆರೋಗ್ಯ ಅಧಿಕಾರಿ ಡಾ. ಜಯಮಾಲ ವಿಶ್ವನಾಥ್ ವಹಿಸಿ ಮಾತನಾಡಿ, ಕಡಿಮೆ ತೂಕದ ಮಕ್ಕಳ ಬೆಳವಣಿಗೆಯ ದೃಷ್ಠಿಯಿಂದ ತಪಾಸಣೆ ಮಾಡುವುದು ತೀರಾ ಅಗತ್ಯ ಮತ್ತು ಸಾಕಷ್ಟು ಪೋಷಕಾಂಶ ಆಹಾರವನ್ನು ಕೊಡುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರ ತಪಾಸಣೆ, ಸಮತೂಕದ ಆಹಾರ, ಸೋಂಕು ರೋಗಗಳ ಚಿಕಿತ್ಸೆ ಕೊಡುವುದರಿಂದ ಇದನ್ನು ತಡೆಗಟ್ಟಬಹುದೆಂದು ತಿಳಿಸಿದರು.

ಸಜೀಪ ವಲಯದ ಮೇಲ್ವಿಚಾರಕಿ ಮುಬೀನಾ ಬಾನು, ಡಾ.ಜೆರಿಟ್ ಬೇಬಿ, ಮಕ್ಕಳ ತಜ್ಞೆಯಾದ ಡಾ. ಸೌಂದರ್ಯ, ಮೆಲ್ಕಾರ್ ಅಂಗನವಾಡಿ ಕಾರ್ಯಕರ್ತೆಯಾದ ವಸಂತಿ ವೇದಿಕೆಯಲ್ಲಿದ್ದರು.ಎ.ಜೆ.ಆಸ್ಪತ್ರೆಯ ವೈದ್ಯಕೀಯ ಸಮಾಜ ಕಾರ್ಯಕರ್ತರಾದ ಸಚಿನ್ ಆರ್. ರವರು ಆಸ್ಪತ್ರೆಯಲ್ಲಿ ಲಭ್ಯವಿರುವ ತಜ್ಞ ವೈದ್ಯರ ಮಾಹಿತಿಯನ್ನು ವಿವರಿಸಿದರು.

ಡಾ. ಪ್ರೀತಮ್ ಹಾಗೂ ಡಾ. ನೇಹಾರವರು ಕಡಿಮೆ ತೂಕದ ಮಕ್ಕಳ ನಿರ್ವಹಣೆ ತಡೆಗಟ್ಟುವ ಬಗ್ಗೆ ಹಾಗೂ ತಾಯಿಯ ಎದೆಹಾಲಿನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು.ಎ.ಜೆ. ಮಕ್ಕಳ ತಜ್ಞೆಯರುಕಡಿಮೆ ತೂಕದ ಮಕ್ಕಳ ತಪಾಸಣೆಗೈದು ಸೂಕ್ತ ಚಿಕಿತ್ಸೆ ನೀಡಿದರು.ಬಂಟ್ವಾಳ ವಲಯ ಮತ್ತು ಸಜೀಪ ವಲಯದ ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು ಹಾಜರಿದ್ದರು. ವಸಂತಿ ವಂದಿಸಿದರು. ಕುಮಾರಿ ಅಕ್ಷತಾ ಕೆ.ಬಿ.ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *