ಮಣಿಪಾಲದಲ್ಲಿ ಬಾಣಸಿಗನ ಸಾವು ಪ್ರಕರಣ: ಇದು ಹತ್ಯೆಯೇ? ಆತ್ಮಹತ್ಯೆಯೇ?
ಮಣಿಪಾಲದಲ್ಲಿ ಬಾಣಸಿಗನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿದೆ. ಮಣಿಪಾಆಲದ ಅನಂತ ಕಾಲ್ಯಾಣ ನಗರದಲ್ಲಿ ಬಾಟಲಿಯಿಂದ ಇರಿದು ಕೇರಳದ ಕಾಸರಗೋಡಿನ ವ್ಯಕ್ತಿ ಎಂದು ಹೇಳಲಾಗಿದೆ. ಮೃತ ವ್ಯಕ್ತಿಯನ್ನು ಶ್ರೀಧರ ಎಂದು ಗುರುತಿಸಲಾಗಿದೆ. ಇನ್ನು ಈ ವ್ಯಕ್ತಿಯನ್ನು ಕುತ್ತಿಗೆಗೆ ಬಾಟಲಿಯಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು. ಸಿಸಿಟಿವಿ ವಿಡಿಯೋ ಸಿಕ್ಕ ನಂತರ ಈ ಶಂಕೆ ಬದಲಾಗಿದೆ.
ಪೊಲೀಸರ ತನಿಖೆಯಲ್ಲಿ ಇತನನ್ನು ಯಾರು ಕೊಲೆ ಮಾಡಿಲ್ಲ. ಆತನನ್ನು ಯಾರು ಹಾದು ಹೋಗಿಲ್ಲ. ಆತನೇ ಬಾಟಲಿಯಿಂದ ತನ್ನ ಕುತ್ತಿಗೆಗೆ ಇರಿದುಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಆತನ ದೇಹವನ್ನು ಮಣಿಪಾಲ ಕಸ್ತೂರಬಾ ಮೆಡಿಕಲ್ ಕಾಆಲೇಜಿಗೆ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಈ ವರದಿಯ ನಂತರ ಎಲ್ಲದರ ಬಗ್ಗೆ ಸ್ಪಷ್ಟನೆ ಸಿಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಮೆಲೋನ್ನಟಕ್ಕೆ ಇದು ಆತ್ಮಹತ್ಯೆ ಎಂಬಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ಇನ್ನು ಆತ ವಿಪರೀತ ಮದ್ಯ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ. ಇನ್ನು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಇನ್ನು ಆತನ ದೇಹವನ್ನು ನೋಡಲು ಆತನ ಕುಟುಂಬದವರು ಕೇರಳದಿಂದ ಆಗಮಿಸಿದ್ದಾರೆ. ಇದರ ಜತೆಗೆ ಈ ಬಗ್ಗೆ ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.