ಚಾಮರಾಜನಗರ: ನೇನೆಕಟ್ಟೆ ಗ್ರಾಮಕ್ಕೆ ಕಾಡಿನಿಂದ ಬಂದ ಕರಡಿ ಮರಿಗಳು
ಚಾಮರಾಜನಗರ ಜಿಲ್ಲೆ ಗುಂಡ್ಲುಟೇಟೆ ತಾಲೂಕಿನ ನೇನೆಕಟ್ಟೆ ಗ್ರಾಮಕ್ಕೆ ಕಾಡಿನಿಂದ ಬಂದ ಕರಡಿ ಮರಿಗಳು ಧಾವಿಸಿದೆ. ನೇನೆಕಟ್ಟೆ ಗ್ರಾಮದ ಬಳಿ ಕರಡಿ ಮರಿಗಳು ಪ್ರತ್ಯಕ್ಷವಾಗಿದೆ. ನೇನೆಕಟ್ಟೆ ಗ್ರಾಮದ ರವಿಕುಮಾರ್ ಜಮೀನಿನ ಬಳಿ ಕರಡಿ ಮರಿಗಳು ಪ್ರತ್ಯಕ್ಷವಾಗಿದೆ. ಕರಡಿ ಓಡಾಟದ ವಿಡಿಯೋ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು, ಮುಂಜಾನೆ ಜಮೀನಿಗೆ ತೆರಳುವಾಗ ಮೂರು ಕರಡಿ ಮರಿಗಳು ಕಾಣಿಸಿಕೊಂಡಿದೆ. ಇನ್ನು ಕರಡಿಗಳ ಓಡಾಟ ಹಿನ್ನಲೆ ಜಮೀನಿಗೆ ತೆರಳಲು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕರಡಿಮರಿಗಳನ್ನ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರ ಅರಣ್ಯ ಇಲಾಖೆಗಳಿಗೆ ಮನವಿ ಮಾಡಿದ್ದಾರೆ, ಈ ಹಿಂದೆ ಕರಡಿ ಓಡಾಟ ಕಂಡು ಗ್ರಾಮಸ್ಥರು ಗಾಬರಿಯಾಗಿದ್ದರು. ಸದ್ಯಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ .