ಉಡುಪಿ: ಕೋಡಿ ಬೀಚ್ ನಲ್ಲಿ ಇಬ್ಬರು ನೀರುಪಾಲು ಓರ್ವ ರಕ್ಷಣೆ
ಕುಂದಾಪುರ ಕೋಡಿ ಬೀಚ್ ನಲ್ಲಿ ಇಬ್ಬರು ನೀರುಪಾಲು ಓರ್ವ ರಕ್ಷಣೆ ಮಾಡಲಾಗಿದೆ. ಮೂವರು ಸಹೋದರರು ಈಜಲು ಸಮುದ್ರಕ್ಕಿಳಿದಿದ್ದಾರೆ. ಈ ಘಟನೆ ಕುಂದಾಪುರ ಕೋಡಿ ಬೀಚಿನಲ್ಲಿ ನಡೆದಿದೆ. ಇನ್ನು ಮೃತನನ್ನನ್ನು ಅಂಪಾರು ನಿವಾಸಿ ದಾಮೋದರ್ ಪ್ರಭು ಎಂಬುವರ ಮಗ ಧನರಾಜ್ (23) ಎಂದು ಗುರುತಿಸಲಾಗಿದೆ.
ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಹೋದರನ ಪುತ್ರ ದರ್ಶನ್ (18) ಗಾಗಿ ಹುಡುಕಾಟ ಮುಂದುವರಿದಿದೆ. ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್ ಎನ್‌ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ.
ಮೂವರು ಸಹೋದರರು ಕುಟುಂಬದ ಜೊತೆ ಬೀಚಿಗೆ ವಿಹರಿಸಲು ಬಂದಿದ್ದರು. ಮುಳುಗಡೆಯಾಗಿದ್ದನ್ನು ಗಮನಿಸಿ ಪ್ರವಾಸಿಗರು ಇಬ್ವರನ್ನು ಮೇಲೆತ್ತಿದ್ದರು. ನಾಪತ್ತೆಯಾಗಿರುವ ದರ್ಶನ್ ಗಾಗಿ ಮುಂದುವರಿದ ಹುಡುಕಾಟ ನಡೆಸಲಾಗುತ್ತಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.