Published On: Mon, Dec 2nd, 2024

ಕಿನ್ನಿಕಂಬಳ ರೋಸಾ ಮಿಸ್ತಿಕಾ ಪ್ರಾಥಮಿಕ-ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ

ಕೈಕಂಬ : ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ೨ ದಿನಗಳ ಜಂಟಿ `ವಾರ್ಷಿಕ ಕ್ರೀಡಾಕೂಟ ೨೦೨೪-೨೫’ಕ್ಕೆ ಡಿ. ೨ರಂದು ಶಾಲಾ ಮೈದಾನದಲ್ಲಿ ಕ್ರೀಡಾ ಧ್ವಜಾರೋಹಣ, ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಹಾಗೂ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕ್ರೀಡಾಕೂಟ ಉದ್ಘಾಟಿಸಿದ ರೋಸಾ ಮಿಸ್ತಿಕಾ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಲೀನಾ ಪಿರೇರ ಅವರು ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವಿನ ಪಾಠವಿದೆ. ಜೀವನದಲಿಲ್ಲೂ ಇವು ಹಾಸುಹೊಕ್ಕಾಗಿದೆ. ಶಿಸ್ತು ಮತ್ತು ಕೌಶಲ್ಯದೊಂದಿಗೆ ಗುರಿ ಸಾಧಿಸುವ ಛಲವಿದ್ದಲ್ಲಿ ಗೆಲುವು ಖಂಡಿತ. ಮಾನವೀಯ ಗುಣ ಬೆಳೆಸುವಲ್ಲಿ ಶಾಲಾ ಮಟ್ಟದಲ್ಲಿ ಆಯೋಜಿಸುವ ವಾರ್ಷಿಕ ಕ್ರೀಡಾಕೂಟಗಳು ನೆರವಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಯ ಸಂಚಾಲಕಿ ಸಿಸ್ಟರ್ ರೋಸ್ ಲೀಟಾ ಅವರು ಮಾತನಾಡಿ, ಇಲ್ಲಿ ನಡೆಯುವ ಕ್ರೀಡಾಕೂಟವು ಶಾಲಾ ಪರಿಸರದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸುವಂತೆ, ವಿದ್ಯಾರ್ಥಿಗಳ ಜೀವನವೂ ಉತ್ಸಾಹವಾಗಲಿ. ಅಣ್ಣ-ತಮ್ಮ, ಅಕ್ಕ-ತಂಗಿಯರAತೆ ಆಡುವ ಘಳಿಗೆ ಇದಾಗಿದ್ದು, ಜೀವನದಲ್ಲಿ ಈ ಭಾವನೆ ಬೆಳೆಸಿಕೊಳ್ಳಬೇಕು. ಜೀವನ ಒಂದು ಸ್ಪರ್ಧೆ ಇದ್ದಂತೆ. ಚಿಂತನಾಶೀಲರಾದಾಗ ಮಾತ್ರ ಪ್ರತಿಯೊಂದು ವಿಷಯದಲ್ಲೂ ಯಶಸ್ಸು ಕಾಣುವಿರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ತಾ.ಪಂ ಮಾಜಿ ಸದಸ್ಯ ಹಾಗೂ ಗಂಜಿಮಠ ಗ್ರಾಪಂಗೆ ಇತ್ತೀಚೆಗೆ ಆಯ್ಕೆಯಾದ ಸದಸ್ಯ ಸುನಿಲ್ ಗಂಜಿಮಠ, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ, ಮೆಲ್ವಿನ್ ಸಲ್ಡಾನ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲ. ಜೆಫ್ರಿಯನ್ ತಾವ್ರೊ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ನಮಿತಾ, ಪ್ರೌಢಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಗೀತಾ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿ ವೆಲೆರಿಯನ್, ರೋಸಾ ಮಿಸ್ತಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೀಡಾಕೂಟ ಆರಂಭಕ್ಕೆ ಮುನ್ನ ಕ್ರೀಡೆಯಲ್ಲಿ ಶಾಲೆಗೆ ಕೀರ್ತಿ ತಂದಿರುವ ಸತ್ಯಂ ಹಾಗೂ ವಿದ್ಯಾರ್ಥಿನಿಯರ ತಂಡಕ್ಕೆ ಅಭಿನಂದನೆ ಸಲ್ಲಿಸಲಾಯಿತು. ರೋಸಾ ಮಿಸ್ತಿಕಾ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲಿಲ್ಲಿ ಡಿ’ಸೋಜ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಐರಿನ್ ಸ್ಟೆಲ್ಲಾ ಡಿ’ಸೋಜ ಮತ್ತು ಪ್ರೌಢಶಾಲೆಯ ಶಿಕ್ಷಕಿ ಸಬೀನಾ ಕ್ರಾಸ್ತ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರಾ ಅವರು ಕ್ರೀಡಾಕೂಟ ನಿರ್ವಹಿಸಿದರು. ರೋಸಾ ಮಿಸ್ತಿಕಾ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಮರಿಸ್ಸಾ ಲೂಸಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter