ಬೆಳ್ತಂಗಡಿ: ಫ್ಯಾಷನ್ ಪ್ಯಾಂಟ್ ಧರಿಸಿದ ಯುವಕನನ್ನು ಹಿಡಿದು ಹೊಲಿಗೆ ಹಾಕಿದ ಪುಂಡರು, ಮನನೊಂದು ಆತ್ಮಹತ್ಯೆಗೆ ಯತ್ನ
ಬೆಳ್ತಂಗಡಿಯ ಮಾರುಕಟ್ಟೆನಲ್ಲಿ ಯುವಕನೊಬ್ಬ ಸ್ಟೈಲಿ ಆಗಿರುವ ಪ್ಯಾಂಟ್ ಧರಿಸಿಕೊಂಡು ಬಂದಿದ್ದ. ಈ ವೇಳೆ ಪುಂಡರ ಗುಂಪೊಂದು ಆತನ ಹಿಡಿದು ಗೋಣಿ ಚೀಲಗಳನ್ನು ಹೊಲಿಯುವ ಡಬ್ಬಣ ಸೂಚಿಯಿಂದ ಆತನ ಪ್ಯಾಂಟ್ ಗೆ ಹೊಲಿಗೆ ಹಾಕಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಅದು ಅವರ ಖುಷಿ ನೀವು ಯಾಕೆ ಅದನ್ನು ತೆಡೆಯುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೀಗ ಇದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದೀಗ ಆ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21) ಗುರುವಾರ ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ವಿನೂತನ ಶೈಲಿಯ (ಹರಿದ ಜೀನ್ಸ್) ಪ್ಯಾಂಟ್ ಧರಿಸಿ ಬಂದಿದ್ದನು. ಈ ವೇಳೆ, ಮಾರುಕಟ್ಟೆಯಲ್ಲಿದ್ದ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್, ಅನೀಶ್ ಪಣಕಜೆ, ಬಾಬ್ ಜಾನ್ ಸಾಹೇಬ್, ಶಾಹಿಲ್ನನ್ನು ಅಡ್ಡ ಹಾಕಿದ್ದಾರೆ. ಬಳಿಕ ಶಾಹಿಲ್ ಅವರ ಎರಡೂ ಕೈಗಳನ್ನು ಲಾಕ್ ಮಾಡಿದ್ದಾರೆ. ನಂತರ, ಶಾಹಿಲ್ ಪ್ಯಾಂಟಿಗೆ ಡಬ್ಬಣದಿಂದ ಹೊಲಿಗೆ ಹಾಕಿದ್ದಾರೆ.
ಹೊಲಿಗೆ ಹಾಕುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಮನನೊಂದ ಶಾಹಿಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಆತನ ಸಾವು-ಮರಣ ನಡುವೆ ಹೋರಾಟುತ್ತಿದ್ದಾನೆ.