ಬೆಳ್ತಂಗಡಿ: ನೇತ್ರಾವತಿ ಶಿಖರದ ಕೆಳಗಿನ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು

ಬೆಳ್ತಂಗಡಿಯ ನೇತ್ರಾವತಿ ಶಿಖರದ ಕೆಳಗಿನ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರಿ ಕಾಡ್ಗಿಚ್ಚು ಉಂಟಾಗಿದೆ. ಬೆಂಕಿಯೂ ಸಾವಿರಾರು ಎಕರೆಗಳನ್ನು ಆವರಿಸಿದೆ ಎಂದು ಹೇಳಲಾಗಿದೆ. ದಿಡುಪೆಯ ಗೋಡೌನ್ ಬೆಟ್ಟದ ಬಳಿ ಆಕಸ್ಮಿಕವಾಗಿ ಪ್ರಾರಂಭವಾದ ಬೆಂಕಿ, ಈ ಬೇಸಿಗೆ ಶೇಕೆಗೆ ವೇಗವಾಗಿ ಹರಡಿ ಹಲವಾರ ಮರ-ಗಿಡಗಳನ್ನು ನಾಶ ಮಾಡಿದೆ. ಹತ್ತಿರದ ಮನೆಗಳಿಗೆ ಅಪಾಯವನ್ನುಂಟು ಮಾಡಿದೆ.