ಬೆಳ್ತಂಗಡಿ: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ, ಬೈಕ್ ಪುಡಿ ಪುಡಿ
ಮಂಗಳೂರು: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಆನೆ ಸೊಂಡಿಲಿನಿಂದ ಕೆಡವಿ ಬೈಕ್ ಪುಡಿ ಪುಡಿ ಮಾಡಿದೆ. ವಸಂತ ಗೌಡ ಎಂಬವರು ತನ್ನ ಮಕ್ಕಳನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬಿಡಲು ಹೋಗುತ್ತಿದ್ದರು. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ. ಭಯದಿಂದ ಬೈಕ್ ನಿಲ್ಲಿಸಿದಾಗ ಸ್ಕಿಡ್ ಆಗಿ ಬಿದ್ದು ವಸಂತ ಗೌಡ ಮತ್ತು ಮಕ್ಕಳಾದ ಲಾವ್ಯ, ಅದ್ವಿತ್ ಗಾಯಗೊಂಡಿದ್ದಾರೆ. ಬಳಿಕ ಮೂವರು ಓಡುತ್ತಿದ್ದಂತೆಯೇ ಒಂಟಿ ಸಲಗ ಬೈಕ್ ಕಡೆಗೆ ಧಾವಿಸಿದೆ. ಬೈಕ್ ನ್ನು ಸೊಂಡಿಲಿನಿಂದ ಕೆಡವಿ ಕಾಲಿನಿಂದ ತುಳಿದು ಸಂಪೂರ್ಣ ಹಾನಿ ಮಾಡಿದೆ.