ಮಂಗಳೂರು: ವಿ.ವಿ ಯ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ, ವಿಶ್ವವಿದ್ಯಾಲಯದ ಆಸ್ತಿಗೆ ಹಾನಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಹಲವು ಸಮಸ್ಯೆ ಉಂಟಾಗಿದೆ. ವಿ.ವಿ ಯ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳ ನಿರ್ಧಾರ ಮಾಡಿದರು. ಉಳ್ಳಾಲ ತಾಲೂಕಿನ ಕೊಣಾಜೆಯಲ್ಲಿರುವ ವಿ.ವಿಯ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಅಂಕಪಟ್ಟಿ ನೀಡುವಲ್ಲಿ ವಿಳಂಬ, ಅವೈಜ್ಞಾನಿಕವಾಗಿ ಕಾಲೇಜಿಗೆ ಶುಲ್ಕಗಳ ಹೆಚ್ಚಳ, ಪರೀಕ್ಷಾ ಶುಲ್ಕ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಎ.ಬಿ.ವಿ.ಪಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನೇತ್ರತ್ವ ವಹಿಸಿತ್ತು.
ಮಂಗಳೂರು ವಿ.ವಿ ಗೆ ಒಳಪಟ್ಟ ಜಿಲ್ಲೆಯ ವಿವಿಧ ಕಾಲೇಜಿನಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಆಗಮಿಸಿದರು. ಬಸ್ ಮೂಲಕವೇ ತಂಡೋಪತಂಡವಾಗಿ ವಿದ್ಯಾರ್ಥಿಗಳು ಆಗಮಿಸಿದರು. ಇನ್ನು ವಿದ್ಯಾರ್ಥಿಗಳು ಮುತ್ತಿಗೆ ಹಾಕುತ್ತಾರೆ ಎಂದು ಅವರನ್ನು ತಡೆಯಲು ಪೊಲೀಸರು ವಿವಿ ಆಡಳಿತ ಕಚೇರಿ ಬಳಿ ಬ್ಯಾರಿಕೇಡ್ ಹಾಕಲಾಯಿತು.
ವಿದ್ಯಾರ್ಥಿಗಳು ಇನ್ನೂ ಇದರಿಂದ ಅಕ್ರೋಶಗೊಂಡು ಬ್ಯಾರಿಕೇಡ್ ತಳ್ಳಿ ಒಳ ನುಗ್ಗಿದ್ದಾರೆ. ವಿ.ವಿ ಆಡಳಿತ ಕಚೇರಿಯ ಪ್ರವೇಶ ದ್ವಾರದ ಗಾಜು ಪುಡಿ ಪುಡಿ ಮಾಡಿದ್ದಾರೆ. ಪೊಲೀಸರು ಕೂಡ ವಿದ್ಯಾರ್ಥಿಗಳು ಒಳ ಹೋಗದಂತೆ ತಡೆದಿದ್ದಾರೆ. ಇನ್ನು ವೇಳೆ ನೂಕಾಟ ತಳ್ಳಾಟದಲ್ಲಿ ಓರ್ವ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗೆ ಗಾಯಗೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಉಪ ಕುಲಪತಿ ಫ್ರೊ.ಪಿ.ಎಲ್. ಧರ್ಮ, ಇದನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ, ಇದು ವಿಶ್ವವಿದ್ಯಾಲಯದ ಆಸ್ತಿ, ಈ ಆಸ್ತಿಗೆ ಹಾನಿ ಮಾಡೋದು ಸರಿಯಲ್ಲ, ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ನೀವು ಮನವಿ ಕೊಡುವಾಗ ಪ್ರತಿಭಟನೆ ಮಾಡಿ ಎಂದಿದ್ದೆ. ನಿಮ್ಮ ಹಕ್ಕಿನಂತೆ ಪ್ರತಿಭಟನೆ ಮಾಡಬಹುದಿತ್ತು. ಆದ್ರೆ ಈ ಬೆಳವಣಿಗೆಯನ್ನು ನಾನು ಇಷ್ಟ ಪಡುವುದಿಲ್ಲ ಎಂದಿದ್ದಾರೆ.