Published On: Wed, Nov 20th, 2024

ಪೊಳಲಿ: 24.85 ಲಕ್ಷ ರೂ. ಆರ್ಥಿಕ ನೆರವು ನೀಡಿದ ಎಸ್. ಆರ್.ಹಿಂದೂ ಫ್ರೆಂಡ್ಸ್ ಪೊಳಲಿ. ಬಡ ಕುಟುಂಬಕ್ಕೆ ಆರ್ಥಿಕ ಸಹಾಯ

ಪೊಳಲಿ:ಬಡತನ ಶಾಶ್ವತವಲ್ಲ, ಸಿರಿತನ ಶಾಶ್ವತವಲ್ಲ, ನಮ್ಮಲ್ಲಿರುವ ಮಾನವೀಯತೆ ಗುಣಗಳೇ ಶಾಶ್ವತ, ಮಾನವೀಯತೆಗೆ ಒಂದು ಒಳ್ಳೆಯ ಉದಾಹರಣೆ ಎಸ್. ಆರ್.ಹಿಂದೂ ಫ್ರೆಂಡ್ಸ್ ಪೊಳಲಿ, ಕಷ್ಟ ಕಾಲದಲ್ಲಿ ಒಬ್ಬರಿಗೆ ಸಹಾಯ ಮಾಡುವ ಸ್ನೇಹಮಯಿಗಳು ಎಸ್. ಆರ್.ಹಿಂದೂ ಫ್ರೆಂಡ್ಸ್ ನ ಸದಸ್ಯರು. ಯಾರೇ ಕಷ್ಟದಲ್ಲಿದ್ದರು ಮೊದಲು ಸ್ಪಂಧಿಸುವ ಜೀವಿಗಳು ಇವರು.ಈ ಸಂಸ್ಥೆಯು ಹಿಂದುತ್ವ ಚಿಂತನೆಗಳ ಸಂಕಲ್ಪವನ್ನು ಹೊಂದಿದ್ದು, ಶ್ರೀ ಪೊಳಲಿ ರಾಜರಾಜೇಶ್ವರಿ ಅಮ್ಮನ ಆಶೀರ್ವಾದದೊಂದಿಗೆ ಇಲ್ಲಿಯವರೆಗೆ ಹಲವಾರು ಬಡಕುಟುಂಬಗಳು ನೆರವು ಪಡೆದುಕೊಂಡಿದೆ.

ಒಟ್ಟು ಇಲ್ಲಿಯವರೆಗೆ 24.85 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದೇವೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟು 2 ಕುಟುಂಬಗಳಿಗೆ ಎಸ್. ಆರ್.ಹಿಂದೂ ಫ್ರೆಂಡ್ಸ್ ಪೊಳಲಿ ನೆರವಾಗಿದೆ. ಬಂಟ್ವಾಳ, ಮೂಡ ಗ್ರಾಮದ ನಿವಾಸಿ ಅರುಣ್ ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕ್ಸಿತೆಗೆ ತುರ್ತು ರೂ.10,000/- ಧನ ಸಹಾಯ ನೀಡಲಾಗಿದೆ. ಇನ್ನು ಬಂಟ್ವಾಳ, ಬಡಕಬೈಲ್ ನಿವಾಸಿ ಚಿಂತನ್ ಪೂಜಾರಿ ಇವರು ಕರಾಟೆ ಚಾಂಪಿಯನ್ ಶಿಪ್ ಗಾಗಿ ಸಿಂಗಾಪುರಕ್ಕೆ ತೆರಳುತಿದ್ದು ಇವರ ಪ್ರಯಾಣ ವೆಚ್ಚಕ್ಕಾಗಿ ರೂ. 10,000/- ಧನ ಸಹಾಯ ಮಾಡಲಾಗಿದೆ.

ಎಸ್. ಆರ್.ಹಿಂದೂ ಫ್ರೆಂಡ್ಸ್ ಪೊಳಲಿ ಬೆನ್ನೆಲುಬಾಗಿ ನಿಲ್ಲಿ…

ಸಹಾಯ ಮಾಡಲು ಬಯಸುವವರು ಈ ವಿಳಾಸ ಸಂಪರ್ಕಿಸಿ

S. R. Hindu friends Polali
A/c No: 70930100000245
Ifsc Code: BARB0VJPOLA
(Ifsc code 5th digit zero)
Bank : Bank Of Baroda
Branch : Polali

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter