ಗಂಜಿಮಠ ಉಪಚುನಾವಣೆ: ಬಿಜೆಪಿ-ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ, ಇದು ಉಳಿವು -ಅಳಿವಿನ ಪ್ರಶ್ನೆ
ಬಂಟ್ವಾಳ ತಾಲೂಕಿನ ಎರಡು ಗ್ರಾಮ ಪಂಚಾಯತ್ಗಳಿಗೆ ಉಪಚುನಾವಣೆ ಘೋಷಣೆ ಮಾಡಲಾಗಿದೆ. ನ.23ರಂದು ಈ ಉಪಚುನಾವಣೆ ನಡೆಯಲಿದೆ. ಒಂದು ಬಡಗಬೆಳ್ಳೂರು ಹಾಗೂ ಗಂಜಿಮಠ, ಗಂಜಿಮಠ ಗ್ರಾಮ ಪಂಚಾಯತ್ನ ಮೊಗರು ವಾರ್ಡ್ ಬಿಜೆಪಿ ಅಭ್ಯರ್ಥಿ ಸಂದೀಪ್ ಶೆಟ್ಟಿ ಮರಣದ ನಂತರ ತೆರವುಗೊಂಡಿರುವ ಮೊಗರ್ ವಾರ್ಡ್ನ ಒಂದನೇ ಸ್ಥಾನಕ್ಕೆ ಈ ಚುನಾವಣೆ ನಡೆಯಲಿದೆ. ಒಟ್ಟು 6 ಅಭ್ಯರ್ಥಿಗಳು ನಾಮಪತ್ರವನ್ನು ಈಗಾಗಲೇ ಸಲ್ಲಿಸಿದ್ದು, ಈಗಾಗಲೇ 4 ಜನ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ತೆಗೆದುಕೊಂಡಿದ್ದಾರೆ.
ಇನ್ನು ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಜಯಾನಂದ ನಾಯ್ಕ್ ಹಾಗೂ ಕಾಂಗ್ರೆಸ್ನಿಂದ ಸುನೀಲ್ ಗಂಜಿಮಠ ಸ್ಪರ್ಧಿಸಲಿದ್ದಾರೆ. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಹಾಗೂ ಭಾರೀ ಕುತೂಹಲವನ್ನು ಕೂಡ ಸೃಷ್ಟಿಸಿದೆ. ಇನ್ನು ಬಿಜೆಪಿ, ಕಾಂಗ್ರೆಸ್, ಎಸ್ಡಿಪಿಐ ಸೇರಿದಂತೆ ಒಟ್ಟು ಆರು ನಾಮಪತ್ರಗಳು ಸಲ್ಲಿಕೆ ಆಗಿತ್ತು. ಬಿಜೆಪಿಯಿಂದ ಗಣೇಶ್, ಕಾಂಗ್ರೆಸ್ ನಿಂದ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷೆ ಮಾಲತಿ ಹಾಗೂ ಎಸ್ಡಿಪಿಐ ಅಝೀಜ್ ಮತ್ತು ಮೊಹಮ್ಮದ್ ಜುಬೈರ್. ಆದರೆ ಇದೀಗ ಈ ನಾಲ್ಕು ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದಿದ್ದಾರೆ.
ಇನ್ನು ವಾರ್ಡ್ ನಲ್ಲಿ ಮಹಿಳೆಯರು 732 ಹಾಗೂ 650 ಪುರುಷ ಮತದಾರರು ಇದ್ದಾರೆ. ಈ ಗ್ರಾಮ ಪಂಚಾಯತ್ನಲ್ಲಿ ಒಟ್ಟು 31 ಸ್ಥಾನಗಳಿದ್ದು, ಬಿಜೆಪಿ ಬೆಂಬಲಿತರು 17 ಸ್ಥಾನ ಹಾಗೂ ಕಾಂಗ್ರೆಸ್ ಬೆಂಬಲಿತ 9 ಹಾಗೂ ಸ್ವಾತಂತ್ರ್ಯವಾಗಿ ಮೂವರು ಸದಸ್ಯರಿದ್ದಾರೆ.