ಬಂಟ್ವಾಳ:ನ.19 ರಿಂದ ಡಿ.5 ರವರೆಗೆ ಪ್ರತಿ ವಲಯ ಮಟ್ಟದಲ್ಲಿ ಪಂಚ ಗ್ಯಾರಂಟಿ ನೋಂದಣಿ ಶಿಬಿರ

ಬಂಟ್ವಾಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಅನುಷ್ಠಾನಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದೆ.ಬಂಟ್ವಾಳ ತಾಲೂಕಿನಲ್ಲಿ ಈ ಜನಪರ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ನ.19 ರಿಂದ ಡಿ.5 ರವರೆಗೆ ಪ್ರತಿ ವಲಯ ಮಟ್ಟದಲ್ಲಿ ನೋಂದಣಿ ಶಿಬಿರ ಆಯೋಜಿಸಲಾಗಿದೆ ಎಂದು ಬಂಟ್ವಾಳ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಗೃಹಜ್ಯೋತಿ, ಯುವನಿಧಿಗೆ ಹೆಸರು, ಗೃಹ ಲಕ್ಷ್ಮಿ, ಯೋಜನೆಯಲ್ಲಿ ನೋಂದಣಿಗೆ ಬಾಕಿ ಇದ್ದವರು ಮತ್ತು ತಿರಸ್ಕೃತಗೊಂಡ ಅರ್ಜಿಗಳ ವಿಲೇವಾರಿ ಸೇರಿದಂತೆ ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳ ಬಗ್ಗೆ ಸಮಿತಿ ವಿಶೇಷ ಮಾಹಿತಿ ನೀಡಲಿದೆ.ಈ ಸಂದರ್ಭ ಅಧಿಕಾರಿಗಳು ಕೂಡ ಉಪಸ್ಥಿತರಿದ್ದು ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು. ಸಮಿತಿ ಸದಸ್ಯರಾದ ಸತೀಶ ಕುಮಾರ್, ಚಂದ್ರಶೇಖರ ಆಚಾರ್ಯ ಕೊಯಿಲ, ಸಿರಾಜ್ ಮಹಮ್ಮದ್, ಐಡಾ ಸುರೇಶ್, ಕೃಷ್ಣಪ್ಪ ಪೂಜಾರಿ ನಾಟಿ ಇನ್ನಿತರರು ಉಪಸ್ಥತರಿದ್ದರು.