ಗದಗ: ಟಿಕೆಟ್ ಕೇಳಿದ್ದಕ್ಕೆ ಕಂಡಕ್ಟರ್ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಯಾಣಿಕರು, ಗಾಯಾಳು ಕಂಡಕ್ಟರ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಟಿಕೆಟ್ ಕೇಳಿದ್ದಕ್ಕೆ ಕಂಡಕ್ಟರ್ ಗೆ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆಯು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರಿಪೂರ ತಾಂಡಾದಲ್ಲಿ ನಡೆದಿದೆ.
ಬಸ್ ಬಾಗಿಲ್ಲಲ್ಲಿ ನಿಂತ ಕಂಡಕ್ಟರ್ ಕೃಷ್ಣಾ ನಾಯಕನನ್ನು ಎಳೆದೊಯ್ದು ಹಲ್ಲೆ ನಡೆಸಲಾಗಿದೆ. ಕಲ್ಲಿನಿಂದ ತಲೆ, ಕತ್ತಿನ ಭಾಗಕ್ಕೆ ಹೊಡೆದು ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯವಾಗಿದೆ. ಬಸ್ ತುಂಬಾ ಪ್ರಯಾಣಿಕರು ಇದ್ರೂ ಜಗಳ ಬಿಡಿಸುವ ಗೋಜಿಗೆ ಹೋಗಿಲ್ಲ. ಆದರೆ ಮಹಿಳೆಯರು ಮಧ್ಯ ಪ್ರವೇಶಿಸಿ ಕಂಡಕ್ಟರ್ ರಕ್ಷಣೆ ಮಾಡಿದ್ದಾರೆ.
ಗಾಯಾಳು ಕಂಡಕ್ಟರ್ ಗೆ ಲಕ್ಷ್ಮೇಶ್ವರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗದಗ ಜಿಲ್ಲೆಯಲ್ಲೂ ಕಂಡಕ್ಟರ್ ಗಳಿಗೆ ಇಲ ರಕ್ಷಣೆ ಎಂದು ಚಾಲಕರು, ನಿರ್ವಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಕಂಡಕ್ಟರ್ ಗಳಿಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.