ಬೆಳ್ತಂಗಡಿ: ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬೆಳ್ತಂಗಡಿ: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯ ಕಾರ್ಯಕ್ರಮಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಧರ್ಮಸ್ಥಳದ ಅಮೃತ ವರ್ಷಿಣಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅವರು ಆಗಮಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಕೂಡ ಈ ಕಾರ್ಯಕ್ರಮದಲ್ಲಿ ಮಾಡಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿರು. ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಮುಂತಾದವರು ಭಾಗಿಯಾಗಿದರು.
ಇನ್ನು ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಯೋಜನೆಯೂ ಗ್ರಾಮೀಣ ಮಹಿಳೆಯರ ಆಶಾ ಕಿರಣ, ಮಹಿಳೆಯರು ಆತ್ಮಗೌರವದಿಂದ ಅವರ ಲಾಭಾಂಶ ಪಡೆಯುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಭಾರತದ ಅಭಿವೃದ್ಧಿ ನಡೆಸುತ್ತಿದೆ. ರಾಜ್ಯದ ಹಲವು ಭಾಗಗಳ ಮಹಿಳೆಯರು ಈ ಲಾಭಾಂಶ ಪಡೆದಿದ್ದಾರೆ. ಇಡೀ ಭಾರತಕ್ಕೆ ಧರ್ಮಸ್ಥಳದ ಯೋಜನೆ ಮಾದರಿಯಾಗಿದೆ. ದೇಶದಲ್ಲಿ ನಬಾರ್ಡ್ ಇದನ್ನು ಮಾದರಿಯಾಗಿ ತೆಗೆದುಕೊಳ್ಳಲಿದೆ. ಇದೇ ಮಾದರಿಯನ್ನು ನಬಾರ್ಡ್ ಕೂಡಾ ಅನುಷ್ಠಾನ ಮಾಡಲಿದೆ. ಈ ಲಾಭಾಂಶದಿಂದ ಪ್ರತೀ ಸ್ವಸಹಾಯ ಸಂಘಗಳ ಮಹಿಳೆಯರಿಗೆ ತಲಾ ಏಳು ಸಾವಿರ ರೂಪಾಯಿ ಸಿಗಲಿದೆ.. ಗ್ರಾಮೀಣ ಭಾರತದ ವಿಕಸನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಾಡಲಿದೆ ಎಂದು ಹೇಳಿದರು.
ಈ ಹಿಂದೆ ಗ್ರಾಮಗಳಲ್ಲಿ ಜನರಿಗೆ ಪ್ರೋಟೀನ್ ಕೊರತೆ ಇತ್ತು. ಆದರೆ ಈಗ ಪ್ರೋಟೀನ್ ಬೆಳೆಗಳನ್ನು ಬೆಳೆದು ಆ ಬೆಳೆಗಳ ರಪ್ತು ಗ್ರಾಮಗಳಲ್ಲಿಯೇ ನಡೆಯುತ್ತಿದೆ. ಗ್ರಾಮೀಣ ಭಾರತದ ಮಹಿಳೆಯರ ಬಲವರ್ಧನೆ ನಡೆಯುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಮೂಲಕ ಸುಮಾರು 600 ಕೋಟಿ ರೂಪಾಯಿಯ ಲಾಭಾಂಶ ವಿತರಣೆ ಮಾಡಲಾಗಿದೆ.