ಕಾಂಗ್ರೆಸ್ ಅಭ್ಯರ್ಥಿಪರ ರೈ ಪ್ರಚಾರ
ಬಂಟ್ವಾಲ: ಮಹಾರಾಷ್ಟ್ರ ಮಹಾಗಡಿ ಸಿಯಾನ್ ಕೋಳಿವಾಡ ವಿಧಾನಸಭಾ ಕ್ಷೇತ್ರದ ಸಂಗಮ್ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಪರ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ ಅವರು
ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿದರು.
ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.